‘ಸರ್ ನಮ್ಮನೆಗೆ ನೀರು ಬರುತ್ತಿಲ್ಲ,ʼ ಎಂದು ಕೇಳಿದಕ್ಕೆ ಸಮಸ್ಯೆ ಹೇಳಿಕೊಂಡವರ ಮೇಲೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗೂಂಡಾವರ್ತನೆ ತೋರಿದ್ದಾರೆ. ಮಾತ್ರವಲ್ಲದೆ, ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ಬಳ್ಳಾರಿ ತಾಲೂಕಿನ ಕುಡುತಿನಿ ಪಟ್ಟಣದಲ್ಲಿ ನಡೆದಿದೆ.
ಘಟನೆಯಲ್ಲಿ ಮಂಜುನಾಥ್ ಎಂಬುವವರ ಮುಖಕ್ಕೆ ಗಾಯಗಳಾಗಿದ್ದು, ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆಪಡೆದುಕೊಂಡು ಮನೆಗೆ ಹೋಗಿದ್ದಾರೆ. ದರ್ಪ ತೋರಿ, ಹಲ್ಲೆ ಮಾಡಿರುವ ಅಧಿಕಾರಿ ತೀರ್ಥ ಪ್ರಸಾದ್ ಅವರನ್ನು ಕೂಡಲೇ ಅಮಾನತು ಮಾಡುವಂತೆ ಮಂಜುನಾಥ್ ಆಗ್ರಹಿಸಿದ್ದಾರೆ.
ತೀರ್ಥ ಪ್ರಸಾದ್ ಅವರ ಗೂಂಡಾಗಿರಿ ಇದೆ ಮೊದಲಲ್ಲ. ಕಳೆದ ಅಕ್ಟೋಬರ್ 03ರಂದು ಇದೆ ಊರಿನ ಗಿರೀಶ್ ಎಂಬ ವ್ಯಕ್ತಿ, ಮನೆ ಮುಂದಿನ ಕಸ ವಿಲೇವಾರಿ ಮಾಡಿ ಸರ್ ಎಂದು ಹೇಳಿದಕ್ಕೆ, ಆತನ ಮೇಲೂ ದರ್ಪ ತೋರಿ ಹಲ್ಲೆಗೆ ಯತ್ನಸಿರುವ ವಿಡಿಯೋ ವೈರಲ್ ಆಗಿದೆ. ಈ ಅಧಿಕಾರಿಯ ಗೂಂಡಾಗಿರಿ ಕುಡುತಿನ ಜನರಿಗೆ ಬೇಸರ ತರಿಸಿದ್ದು, ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ರೌಡಿ ಅಧಿಕಾರಿ ವರ್ತನೆಯಿಂದ ಕಛೇರಿಗೆ ಹೋಗೋಕೆ ಜನರು ಭಯ ಪಡಬೇಕಾಗಿದೆ. ಕೂಡಲೇ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಶಿಕ್ಷೆ ನೀಡುವಂತೆ ಘಟನೆ ಪ್ರತ್ಯಕ್ಷದರ್ಶಿ ಯೋಗೇಶ್ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.