ಬಸವಣ್ಣನವರ ಪುತ್ಥಳಿ ನಿರ್ಮಿಸಿ ಪೂಜೆಗೆ ಸೀಮಿತಗೊಳಿಸದೆ, ಜಗಜ್ಯೋತಿ ಬಸವಣ್ಣನವರ ತತ್ವ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಕೆ ರವೀಂದ್ರನಾಥ್ ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸಿದ ವೇಳೆ ಮಾತನಾಡಿದರು.
“12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಸಮಾಜದಲ್ಲಿದ್ದಂಥ ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಅಂಧಕಾರಗಳನ್ನು ನಿರ್ಮೂಲನೆ ಮಾಡಿ, ಧಾರ್ಮಿಕ ಮೂಢನಂಬಿಕೆಗಳನ್ನು, ಕಿತ್ತೊಗೆದು, ಕಾಯಕ ದಾಸೋಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಇಂದಿನ ಸಂವಿಧಾನದ ಆಶಯವಾದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವವನ್ನು 12ನೇ ಶತಮಾನದಲ್ಲಿಯೇ ಬಸವಣ್ಣನವರು ರೂಪಿಸಿ ನಿರೂಪಿಸಿದ್ದರು. ಈ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ, ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ” ಎಂದು ನುಡಿದರು.
ಇದೇ ವೇಳೆ ದಾಸೋಹಿ ಶರಣ ಪ್ರಭುದೇವ ಅರಳಿ ಅವರನ್ನು ಸತ್ಕರಿಸಲಾಯಿತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮರೆಡ್ಡಿ ಹೀರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೆ ರವೀಂದ್ರನಾಥ ಅವರ ನೇತೃತ್ವದಲ್ಲಿ, ಪ್ರಭುರಾಜ ಅರಳಿ ಅವರು ತಮ್ಮ ತಂದೆ ಕೊಟ್ರೇಶಪ್ಪ ಅರಳಿ ಅವರ ಸ್ಮರಣಾರ್ಥ ನೀಡಿದ ಜಗಜ್ಯೋತಿ ಬಸವೇಶ್ವರ ಫೋಟೋವನ್ನು ಅನಾವರಣಗೊಳಿಸಿದರು.
ಈ ಸುದ್ದಿ ಒದಿದ್ದೀರಾ? ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪಂಚಮಸಾಲಿ ಶ್ರೀಗೆ ಬಿಜೆಪಿ ಸುಪಾರಿ: ಕೆ ಎಸ್ ಶಿವರಾಮು ಆರೋಪ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮಿ, ಲಿಂಗಾಯತ ಸಮಾಜದ ಮುಖಂಡರಾದ ಬಸವರಾಜ ಮಾವಿನಹಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ್ ಅವರಾದಿ, ಕೋರಿ ಶೆಟ್ಟಿ ಲಿಂಗಪ್ಪ, ಡಾ. ಮಹಾಬಲೇಶ್ವರ ರೆಡ್ಡಿ, ಶರಣಗೌಡ ಪೊಲೀಸ್ ಪಾಟೀಲ, ಇಷ್ಠಲಿಂಗ ಅಧ್ಯಯನದ ಬಸವರಾಜ ಮಾವಿನಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ ಅವರಾಧಿ, ಲಿಂಗಾಯತ ಸಮಾಜದ ಗಣ್ಯರಾದ ಕೊರಿಶೆಟ್ಟಿ ಲಿಂಗಪ್ಪ, ಶರಣುಸ್ವಾಮಿ, ಡಾ.ಮಹಾಬಲೇಶ್ವರ ರೆಡ್ಡಿ, ಅರಳಿ ಪ್ರಭು, ಜಾಫರಸಾಬ, ಬಸವಣ್ಣ ಲಿಂಗಾಯತ, ಸೋ ದಾ ವಿರೂಪಾಕ್ಷಗೌಡ, ಮುದನೂರು ಉಮಾಮಹೇಶ ಇದ್ದರು.