ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವ ವಿಚಾರಕ್ಕೆ ನನ್ನ ಗಮನಕ್ಕಿಲ್ಲ. ತಾಲೂಕು ದಾವಣಗೆರೆ ಜಿಲ್ಲೆಯಲ್ಲೇ ಉಳಿಯಬೇಕು ಎಂಬ ಅಭಿಪ್ರಾಯಗಳೂ ಇವೆ. ಸಾರ್ವಜನಿಕರಿಗೆ ಎಲ್ಲಿ ಹಿತವೆನಿಸುತ್ತದೆಯೋ ಅವರ ಪರವಾಗಿ ನಾನು ಇರುತ್ತೇನೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ತಾಲೂಕು ಇರಬೇಕು ಎಂದು ಹೋರಾಟ ಸಮಿತಿಯು ಒತ್ತಾಯಿಸಿದೆ. “ಜಗಳೂರು ಚಿತ್ರದುರ್ಗಕ್ಕೆ ಮರು ಸೇರ್ಪಡೆಯಿಂದ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು. ಇದಕ್ಕೆ ಸಹಕಾರ ನೀಡಬೇಕು” ಎಂದು ಶಾಸಕರಿಗೆ ಮನವಿ ಸಲ್ಲಿಸಿದೆ.
ಹೋರಾಟಗಾರರ ಮನವಿ ಸ್ವೀಕರಿಸಿ ಅವರು ಮಾತನಾಡಿದರು. “ಜಗಳೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗಿದೆ. ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಬರ ನಿರ್ವಹಣೆ ಮಾಡಬೇಕಾಗಿದೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ತೀರ್ಮಾನ ಕೈಗೊಳ್ಳಲಾಗುವುದು. ಕ್ಷೇತ್ರ ಮುಂದಿನ ಐದು ವರ್ಷಗಳಲ್ಲಿ ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರು ಸಂಪೂರ್ಣ ಸಹಕಾರ ನೀಡಬೇಕು” ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ತಾಲೂಕನ್ನು ಉಳಿಸುವ ಹೋರಾಟದ ಸಮಿತಿಯ ಮುಖಂಡ ಸುಭಾಷ್‌ಚಂದ್ರ ಭೋಸ್, ಹಿರಿಯ ವಕೀಲರಾದ ಬಸವರಾಜಪ್ಪ, ಶಿವನಗೌಡ, ಬಸಾಪುರ ರವಿಚಂದ್ರ, ಹೆಚ್.ಸಿ.ಮಹೇಶ್, ಜಿ.ಹೆಚ್. ಶಂಭುಲಿಂಗಪ್ಪ, ಚಂದ್ರನಾಯ್ಕ, ವೈ.ಎನ್.ಮಂಜುನಾಥ್, ಓಮಣ್ಣ, ದಿದ್ದಿಗೆ ಕರಿಬಸವನಗೌಡ, ನಾಗರಾಜ್‌ನಾಯಕ್, ಶಿವಕುಮಾರ್‌ಸ್ವಾಮಿ, ಗೋಗುದ್ದು ರಾಜು, ಗೋಡೆ ಪ್ರಕಾಶ್, ವೀರೇಂದ್ರ ಪಾಟೀಲ್, ಎಂ.ಎಸ್.ಪಾಟೀಲ್, ಡೆಂಕಪ್ಪ ಬಸವರಾಜ್, ಬೆಲ್ಲದ ಬಸವರಾಜ್, ಗಿರೀಶ್, ಜಗದೀಶ್ ಗೌಡ್ರು, ಹರೀಶ್, ದೀಪಕ್ ಪಾಟೀಲ್, ಅಸಗೋಡು ಸುರೇಶ್ ಗೌಡ್ರು, ಅಥ್‌ರ್, ಗುರುಮೂರ್ತಿ ಸೇರಿದಂತೆ ಇತರರು ಇದ್ದರು.