ಜಮೀಯತುಲ್ ಫಲಾಹ್ ಕಾಪು ಘಟಕದ ಮಹಾ ಸಭೆಯು ಮುಹಮ್ಮದ್ ಆಸೀಫ್ ಬೈಕಾಡಿಯವರ ಅದ್ಯಕ್ಷತೆಯಲ್ಲಿ , ಕಾಪು ಸಿಟಿ ಸೆಂಟರ್ ನಲ್ಲಿರುವ ಜಮೀಯತುಲ್ ಫಲಾಹ್ ಕಛೇರಿಯಲ್ಲಿ ನಡೆಯಿತು.
ಮುಂದಿನ ಎರಡು ವರ್ಷದ ಅವಧಿಗೆ 21 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ತದ ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು, ಉಪಾಧ್ಯಕ್ಷರಾಗಿ ಅನ್ವರ್ ಅಲಿ ಕಾಪು, ಬುಡನ್ ಸಾಹೇಬ್ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಶಭಿಹ್ ಅಹಮದ್ ಕಾಝಿ, ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀಮ್ ಕಲ್ಪಂಡ್ಡೆ , ಕೋಶಾಧಿಕಾರಿಯಾಗಿ ನಸೀರ್ ಅಹಮದ್ ಶರ್ಫುದ್ದೀನ್ , ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಲೇಮಾನ್, ಪತ್ರಿಕಾ ಕಾರ್ಯದರ್ಶಿಯಾಗಿ ಶೇಕ್ ಸನವರ್ ರವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು.
ವೀಕ್ಷಕರಾಗಿ ಮುಹಮ್ಮದ್ ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು. ಅನ್ವರ್ ಅಲಿ ಯವರ ಕುರ್ ಆನ್ ಪಠನದೊಂದಿಗೆ ಸಭೆಯು ಪ್ರಾರಂಭವಾಯಿತು. ನಿರ್ಗಮನ ಅಧ್ಯಕ್ಷರು ಶಭಿಹ್ ಅಹಮದ್ ಕಾಝಿ ಯವರು ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಜೆ. ಎಫ್ ನ ಬಳಗಕ್ಕೆ ಕ್ರತಜ್ಞತೆ ಸಲ್ಲಿಸಿದರು.
ಹಾಲಿ ಅಧ್ಯಕ್ಷರು ಮುಹಮ್ಮದ್ ಇಕ್ಬಾಲ್ ಸಾಹೇಬರು ನಮ್ಮ ಮುಂದೆ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ಹಾಕಿಕೊಂಡ್ಡು, ಅದನ್ನು ಅನುಷ್ಠಾನಿಸಲು ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಎಂದು ವಿನಂತಿಸಿಕೊಂಡರು.
ನಸೀರ್ ಅಹಮದ್ ಶರ್ಫುದ್ದಿನ್ ರವರು ಧನ್ಯವಾದಗ ನೀಡಿದರು. ದುವಾ ದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.