ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರೇ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಿ ಸೋತಿದ್ದರೋ, ಅಲ್ಲೇ ನಿಲ್ಲಿಸಿ ಗೆಲ್ಲಿಸಬೇಕಿತ್ತು. ಮಂಡ್ಯ ಅಥವಾ ರಾಮನಗರದಲ್ಲೇ ಮರು ಸ್ಪರ್ಧೆ ಮಾಡಿಸಬೇಕಿತ್ತು. ಹಾಗೆ ಮಾಡದೇ ಜೆಡಿಎಸ್‌ನವರೇ ಕೈಯಾರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಳೆದುಕೊಂಡಿದ್ದಾರೆ ಎಂದು ಹಾಸನ ಕ್ಷೇತ್ರ ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಮೂರು ಕ್ಷೇತ್ರಗಳಲ್ಲಿ ಎಲ್ಲಿ ಬೇಕಂದರೆ ಅಲ್ಲಿ ನಿಲ್ಲಿಸಿ ತಪ್ಪು ಮಾಡಿದ್ದಾರೆ. ಈಗ ಮೂರು ಕಡೆ ಸೋತು ಬಿಟ್ಟರು. ಒಂದು ಕಡೆ ಜೆಡಿಎಸ್‌ನವರು ಸಿ.ಪಿ.ಯೋಗೇಶ್ವರ್ ಅವರಿಗೆ ಮೋಸ ಮಾಡಿದ್ರು, ಆದರೆ, ಚನ್ನಪಟ್ಟಣ ಜನರು ಅವರನ್ನು ಕೈ ಬಿಡಲಿಲ್ಲ ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಹಾಸನ | ಹಂದಿಜೋಗಿ ಕಾಲೋನಿಗೆ ಅಂಬೇಡ್ಕರ್ ಭವನ ನಿರ್ಮಾಣ; ಭೂಮಿ ಮಂಜೂರು ಮಾಡುವಂತೆ ಸಿಜಿಎಂ ಆಗ್ರಹ
ಯೋಗೇಶ್ವರ್ ಅವರು ಹೋದ ಕಡೆಯಲೆಲ್ಲಾ ಮಂಕಾಗಿ ಚುನಾವಣೆ ಪ್ರಚಾರ ಮಾಡಿದ್ದರು, ವಿರೋಧಿಗಳು ಸಿಎಂ ಬಗ್ಗೆ ಟೀಕೆ ಮಾಡಿದರು, ನಮ್ಮ ನಾಯಕರ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಿದ್ದರು. ಈ ಜನಾದೇಶದ ಬಗ್ಗೆ ಎಲ್ಲರೂ ಒಪ್ಪಿಕೊಳ್ಳಬೇಕು. ನಾವು ಕೂಡ ಇಷ್ಟು ಅಂತರದಲ್ಲಿ ಯೋಗೇಶ್ವರ್ ಗೆಲ್ಲುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
