ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು (ಗುರುವಾರ) ಚುನಾವಣೆ ನಡೆಯುತ್ತಿದೆ. ಆದರೆ, ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಲಿತರು ಸ್ಪರ್ಧಿಸಬಾರದೆಂದು ಪ್ರಬಲ ಜಾತಿಯವರು ಬೆದರಿಕೆ ಹಾಕಿದ್ದಾರೆ ದಲಿತರಿಗೆ ರಕ್ಷಣೆ ಕೊಡಬೇಕು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಬುಧವಾರ ರಾತ್ರಿ ಜೇವರ್ಗಿ ಪೊಲೀಸ್ ಠಾಣೆಯ ಸಿಸಿಪಿಐಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಹಿರಿಯ ದಲಿತ ಮುಖಂಡ ಭೀಮರಾಯ ನಗನೂರ್ ಮಾತನಾಡಿ, “ಅರಳಗುಂಡಗಿ ಗ್ರಾಮದ ಶರಣಗೌಡ, ಹಿರೇಗೌಡ, ಶಿವಣಗೌಡ ಪೊಲೀಸ್ ಪಾಟೀಲ, ಮತ್ತು ದೇವಪ್ಪ ಪೂಜಾರಿ ಎಂಬವರು ಸ್ವಪ್ನ ಅವರ ಮನೆಗೆ ನುಗ್ಗಿ, ಜಾತಿ ನಿಂದನೆ ಮಾಡಿ, ಅವಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಸಂವಿಧಾನದ ಅಡಿಯಲ್ಲಿನ ರಾಜಕೀಯ ಹಕ್ಕು ಪಡೆದುಕೊಳ್ಳಲು ಗ್ರಾಮ ಪಂಚಾಯತಿಯ ಹಲವಾರು ಸದಸ್ಯರು ಮತ್ತು ಗ್ರಾಮದ ಪ್ರಮುಖ ಮುಖಂಡರ ಬೆಂಬಲ ಸಹಕಾರ, ಒಪ್ಪಿಗೆ ಮೇಲೆ ಅಧ್ಯಕ್ಷ ಸ್ನಾನಕ್ಕೆ ಸ್ವಪ್ನ ಅವರು ಸ್ಪರ್ಧಿಸಿದ್ದಾರೆ. ಅದರೆ, ಅದನ್ನು ಸಹಿಸದ ಪ್ರಬಲ ಜಾತಿಯ ಕೆಲವರು ಬೆದರಿಕೆ ಹಾಕಿದ್ದಾರೆ” ಎಂದು ದೂರಿದ್ದಾರೆ.
“ಬೆದರಿಕೆ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲು ಹೋದರೆ, ಅಲ್ಲಿನ ಪಿಎಸ್‌ಐ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರೇ ದಲಿತರಿಗೆ ರಕ್ಷಣೆ ನೀಡದಿದ್ದರೆ, ಶೋಷಿತರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು. ಯಡ್ರಾಪಿ ಪಿಎಸ್‌ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರುಗಳಾದ. ಸಿದ್ದರಾಮ ಕಟ್ಟಿ.ಶ್ರೀ ಹರಿ ಕರಕಹಳ್ಳಿ. ಸಿದ್ದು ಕೆರೂರ.ಶರಣಬಸಪ್ಪ ಲೆನ್ನಾಪೂರ.ಮಹೇಶ ಕೋಕಿಲೆ.ಸಂಗಣ್ಣ ಹೊಸಮನಿ.
ಲಕ್ಷ್ಮಣ ಡೊಳ್ಳೆ ಇತರರು ಇದರು.