ತುಮಕೂರು | ಪತ್ರಕರ್ತರಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲವಾಗಿದೆ : ಶಾಸಕ ಬಿ ಆರ್ ಪಾಟೀಲ್

Date:

Advertisements

ಸಂವಿಧಾನದ ಆಶಯವನ್ನು ಈಡೇರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಆದರೆ, ಪತ್ರಕರ್ತರಿಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲವಾಗಿರುವುದು ಅತೀ ನೋವಿನ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಮತ್ತು ಶಾಸಕ ಬಿ ಆರ್ ಪಾಟೀಲ್ ಹೇಳಿದರು.

ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಭಾಗವಾಗಿ ನಡೆದ “ಸಂವಿಧಾನ ಮತ್ತು ಮಾಧ್ಯಮ” ಕುರಿತ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನ ಬಹಳ ಗಟ್ಟಿಯಾಗಿತ್ತು. ಆದರೆ ಸಂವಿಧಾನ ತಿದ್ದುಪಡಿ ಮಾಡದೆ ಅಪ್ರತ್ಯಕ್ಷ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು. ಮಾಧ್ಯಮಕ್ಕೆ ಸಂವಿಧಾನ ಎಲ್ಲಾ ರೀತಿಯ ಹಕ್ಕನ್ನು ಕೊಟ್ಟಿದೆ. ಪ್ರತಿಯೊಬ್ಬರಿಗೂ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಕೊಟ್ಟಿದೆ. ಆದರೆ, ಸಂವಿಧಾನದ ಆಶಯವನ್ನು ಈಡೇರಿಸುವ ಕೆಲಸವನ್ನು ಬಂದಂತಹ ಸರಕಾರಗಳು ಮಾಡಲಿಲ್ಲ ಎಂದು ವಿಷಾದಿಸಿದರು.

Advertisements

ಪತ್ರಕರ್ತರು ಜನಪರವಾದ ಚಳವಳಿಗಳನ್ನು ಕಟ್ಟುವ ಅವಶ್ಯಕತೆ ಇದೆ. ಚಳವಳಿಗಳಿಗೆ ಬದಲಾವಣೆ ಮಾಡುವ ಶಕ್ತಿ ಇದೆ. ಅದರಲ್ಲಿ ಲಂಕೇಶ್ ಪತ್ರಿಕೆಯು ಒಂದು. ನಿರ್ಭಯ ಪತ್ರಕರ್ತರಾದ ಲಂಕೇಶ್ ಅವರು ನಿರ್ಭೀತ ಪತ್ರಿಕೋದ್ಯಮ ಕಟ್ಟುವ ಕೆಲಸವನ್ನು ಮಾಡಿದ್ದರು ಎಂದು ಸ್ಮರಿಸಿದರು.

ಗೊಂದಲವನ್ನು ಸೃಷ್ಟಿ ಮಾಡಿ ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಗೌರಿ ಹತ್ಯೆಗೈದವರನ್ನು ಬಿಜಾಪುರದಲ್ಲಿ ಸನ್ಮಾನ ಮಾಡಲಾಯಿತು. ಅದನ್ನು ಮಾಧ್ಯಮಗಳಲ್ಲಿ ಖಂಡಿಸುವಂತ ಕೆಲಸ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತರು ಜನರ ಕೈಗನ್ನಡಿಯಾಗುವಂತ ಕೆಲಸವನ್ನು ಮಾಡಬೇಕಿದೆ. ಹಿಂಸೆಯನ್ನು ಪ್ರಚೋದನೆ ಮಾಡುವ, ಅನ್ಯರನ್ನು ತುಳಿಯುವಂತ ಕೆಲಸಕ್ಕೆ ಯಾರೂ ಸಹ ಮುಂದಾಗಬಾರದು ಎಂದು ಹೇಳಿದರು.

ಇಂಗ್ಲೀಷ್‌ ಪತ್ರಿಕೆಗಳಲ್ಲಿ ಹೋರಾಟ ಮತ್ತು ಚಳವಳಿಗಳ ಸುದ್ದಿಗಳು ಬರುತ್ತಿವೆ. ಆದರೆ, ಕನ್ನಡ ಮಾಧ್ಯಮಗಳಲ್ಲಿ ಚಳವಳಿಗಳ ಸುದ್ದಿಗಳು ಬರುತ್ತಿಲ್ಲ. ಮೂಢನಂಬಿಕೆ ಬಿತ್ತುವ ಕೆಲಸ ಆಗಬಾರದು. ಮೂಢನಂಬಿಕೆಯನ್ನು ನಿಷೇಧಿಸಬೇಕು ಎಂದು ವಿಧಾನಸೌಧದಲ್ಲಿ ದನಿ ಎತ್ತಿದ್ದೇವೆ. ಅದಕ್ಕಾಗಿ ಒಂದು ಮಸೂದೆಯನ್ನು ಸಹ ಜಾರಿಗೆ ತರಲಾಗಿದ್ದು, ಪ್ರಸ್ತುತ ಈ ಮಸೂದೆಯು ಹಲ್ಲಿಲ್ಲದ ಹಾವಾಗಿದೆ. ಪತ್ರಿಕೆಗಳಲ್ಲಿ ಮೌಢ್ಯ ಬಿತ್ತುವ ಜಾಹೀರಾತುಗಳು ಸಹ ನಿರ್ಬಂಧ ಆಗಬೇಕು ಎಂದರು.

ಪತ್ರಕರ್ತರು ನಿರ್ಭೀತಿಯಿಂದ, ನ್ಯಾಯಯುತವಾಗಿ, ಸಂವಿಧಾನಾತ್ಮಕವಾಗಿ ಸಮಾಜದ ಆಶಯ ಈಡೇರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!

161ನೇ ಸ್ಥಾನದಲ್ಲಿ ಭಾರತ! :

ಹಿರಿಯ ಪತ್ರಕರ್ತ ಜಿ ಎನ್‌ ಮೋಹನ್‌ ಮಾತನಾಡಿ, ಮಾಧ್ಯಮ ಸ್ವಾಂತಂತ್ರ್ಯಕ್ಕೆ ಸಂಬಂಧಿಸಿದಂತೆ 180 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತ ದೇಶವು 161ನೇ ಸ್ಥಾನದಲ್ಲಿದೆ. ಪ್ರಸ್ತುತ ಭಾರತ ದೇಶದಲ್ಲಿ ತಪ್ಪುಗಳನ್ನು ಎತ್ತಿ ಹಿಡಿದರೆ ಕೊಲ್ಲಲಾಗುತ್ತಿದೆ. ದನಿ ಇಲ್ಲದವರ ಪರವಾಗಿ ನಿಂತರೆ ದನಿ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ನಮಗೆ ಮಾತಾಡಲು, ದನಿ ಎತ್ತಲು ಧೈರ್ಯ ತುಂಬುತ್ತದೆ. ಭಾರತದ ಸಂವಿಧಾನ ಪ್ರಜೆಗಳಿಗೆ ನೀಡಿರುವ ವಾಕ್ ಸ್ವಾತಂತ್ರವನ್ನು ಮಾಧ್ಯಮಗಳಿಗೂ ಸಹ ಕೊಟ್ಟಿದೆ. ಮಾಧ್ಯಮಕ್ಕೆ ಸಂವಿಧಾನದಲ್ಲಿ ವಿಶೇಷ ರಕ್ಷಣೆ ಕೊಟ್ಟಿದೆಯೇ ಎಂಬುದನ್ನು ನೋಡಿದಾಗ ಅಮೆರಿಕ ಮಾತ್ರ ವಿಶೇಷ ರಕ್ಷಣೆ ನೀಡಿದೆ. ಆದರೆ, ನಮ್ಮಲ್ಲಿ ಅಂತಹ ರಕ್ಷಣೆ ಕೊಟ್ಟಿಲ್ಲ ಎಂದು ಹೇಳಿದರು.

ಅಂಬೇಡ್ಕರ್ ಅವರು ಮಹಾನ್ ಪತ್ರಕರ್ತರು, ಸಾಕಷ್ಟು ಪತ್ರಿಕೆ ನಡೆಸಿದ್ದಾರೆ. ನಮ್ಮ ನಾಯಕರನ್ನು ಹೊಗಳಲು ಬಂದಿದ್ದೇ ನಮ್ಮ ಪತ್ರಿಕೋದ್ಯಮ ಎಂದು ಆ ಕಾಲದಲ್ಲೇ ಹೇಳಿದ್ದರು. ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡರೆ ಮಹಾನ್ ನಾಯಕರನ್ನು ಹುಟ್ಟುಹಾಕುವುದು ಬಹಳ ಸುಲಭ ಎಂದು ಸಹ ಹೇಳಿದರು. ಬಲಿಷ್ಠರ ಕೈಯಲ್ಲಿ ಪತ್ರಿಕೋದ್ಯಮ ಇದ್ದರೆ ಅದು ಮಾಧ್ಯಮ ಕ್ಷೇತ್ರದ ಮೌಲ್ಯವನ್ನು ಹಾಳು ಮಾಡುತ್ತದೆ ಎಂದೂ ಸಹ ಅಂಬೇಡ್ಕರ್ ಹೇಳಿದ್ದಾರೆ ಎಂದು ಅಂಬೇಡ್ಕರ್‌ ಅವರ ಮಾತುಗಳನ್ನು ಸ್ಮರಿಸಿದರು.

ಒಪ್ಪಿಗೆಯನ್ನು ಉತ್ಪಾದನೆ ಮಾಡುವ ವಿಶ್ವಗುರು ಸಂಸ್ಕೃತಿ ನಮ್ಮಲ್ಲಿದೆ. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಬೇಕೋ. ಅದೇ ರೀತಿ ಮಾಧ್ಯಮದ ಒಳಗೂ ಸಹ ಪ್ರಜಾಪ್ರಭುತ್ವ ಇರಬೇಕಿದೆ. ದನಿ ಎತ್ತಿದರೆ ನಮ್ಮನ್ನ ಇಲ್ಲವಾಗಿಸುವ ಹುನ್ನಾರ ನಡೆಯುತ್ತಿದೆ. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಇರದೆ ಇರುವ ಹಾಗೆ ನೋಡಿಕೊಳ್ಳಲಾಗುತ್ತಿದೆ. ನಮ್ಮ ಮಾಧ್ಯಮಗಳು ಸಂವಿಧಾನದ ಬುಡಕ್ಕೇ ಕೊಡಲಿ ಏಟು ಕೊಡಲು ನಿಂತಿರುವಾಗ ಬಹಳ ನಿರಾಶಾದಾಯಕ ಆಗುತ್ತದೆ ಎಂದು ಆತಂಕಗೊಂಡರು.

ಸಂವಿಧಾನದ ಉಳಿವಿಗೆ ಪ್ರಜಾಪ್ರಭುತ್ವ ಬೇಕು. ಹಾಗೆಯೇ ಮಾಧ್ಯಮದ ಉಳಿವಿಗೆ ಪ್ರಜಾಪ್ರಭುತ್ವವನ್ನು ಉಳಿಸುವ ಅಗತ್ಯತೆ ಇದೆ. ಸಂವಿಧಾನದ ಪರವಾಗಿ ನಾವು ಇದ್ದಾಗ ಮಾತ್ರ ಮಾಧ್ಯಮದ ಉಳಿವು ಸಾಧ್ಯ ಎಂದು ಹೇಳಿದರು.

ಸಂವಿಧಾನದ ಮೂರ್ತ ಸ್ವರೂಪ ಮಾಧ್ಯಮ :

ಮತ್ತೊಬ್ಬ ಪತ್ರಕರ್ತ ರವಿಕುಮಾರ್‌ ಮಾತನಾಡಿ, ಪತ್ರಕರ್ತರಿಗೆ ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರು ಮಾದರಿ ಆಗಬೇಕು. ಸಂವಿಧಾನಕ್ಕೂ ಕೂಡ ಸಂಕಷ್ಟದ ಕಾಲವಿದೆ. ಮಾಧ್ಯಮಕ್ಕೂ ಕೂಡ ಸಂಕಷ್ಟ ಎದುರಾಗಿದೆ. ಸುದ್ದಿ ಮಾಧ್ಯಮ ಕ್ಷೇತ್ರ ಅತ್ಯಂತ ಆತಂಕಕಾರಿ ಘಟ್ಟದಲ್ಲಿದೆ ಎಂದು ಹೇಳಿದರು.

ಪತ್ರಕರ್ತರು ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯಬೇಕು. ನಮ್ಮ ಪತ್ರಕರ್ತರಲ್ಲಿ ನಿಜಾಂಶವನ್ನು ಅರಿಯುವ ಪ್ರಯತ್ನ ಕಡಿಮೆ ಇದೆ. ಸಂವಿಧಾನದ ಮೂರ್ತ ಸ್ವರೂಪ ಮಾಧ್ಯಮ. ಅಡಿಗಡಿಗೂ ರಾಜಕೀಯ ಶಕ್ತಿಗಳು ನಮಗೆ ಶತ್ರುವಾಗುತ್ತಿವೆ. ಮಾಧ್ಯಮ ಕ್ಷೇತ್ರವನ್ನು ಇನ್ನಷ್ಟು ಸತ್ಯ, ನ್ಯಾಯ, ಪ್ರಾಮಾಣಿಕತೆಯ ಕಡೆಗೆ ಒಯ್ಯಬೇಕಿದೆ ಎಂದು ರವಿಕುಮಾರ್ ಹೇಳಿದರು.

ಇದನ್ನೂ ಓದಿ : ಪತ್ರಕರ್ತರ ಸಮ್ಮೇಳನ | ಊಹಾ ಪತ್ರಿಕೋದ್ಯಮ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ ಅಭಿಮತ

ಇದೇ ವೇಳೆ ಅತ್ಯುತ್ತಮ ಕೋಲಾಟ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಕೋಲಾರ ತಂಡಕ್ಕೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

ಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘದ ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ್‌, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್ ಸೇರಿದಂತೆ ಇತರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X