ಮಗಳನ್ನು ಕೊಲೆ ಮಾಡಿರುವ ಅಳಿಯನನ್ನು ಬಂಧಿಸುವಂತೆ ಆಗ್ರಹಿಸಿ ಗುಬ್ಬಿಯ ಹರಿಶೇಷ ದಂಪತಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಪೋಷಕರನ್ನು ಕರೆಸಿಕೊಂಡು ವಿಚಾರಣೆ ಮಾಡದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಮೃತದೇಹದ ಮೇಲೆ ಗಾಯಗಳನ್ನು ಗಮನಿಸಿದಾಗ, ಹೊಡೆದು ಸಾಯಿಸಿರುವುದು ತಿಳಿಯುತ್ತದೆ. ಹಣದ ಆಮಿಷಕ್ಕೆ ಒಳಗಾಗಿ ಸರಿಯಾದ ರೀತಿಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ. ಜಿಲ್ಲಾಧಿಕಾರಿಗಳು ಈ ಕುರಿತು ಗಮನ ಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮೃತಳ ತಂದೆ-ತಾಯಿ ಒತ್ತಾಯಿಸುತ್ತಿದ್ದಾರೆ.
ನಮ್ಮ ಮಗಳು ಯಶೋದಮ್ಮನನ್ನು, ತಾಲ್ಲೂಕಿನ ಊರ್ಡಿಗೆರೆ ಟಿ.ಎನ್.ಅಭಿಲಾಷ್‌ಗೆ, 2020ರ ಮೇ 30ರಂದು ಮದುವೆ ಮಾಡಿಕೊಡಲಾಗಿತ್ತು. ಪ್ರಾರಂಭದಲ್ಲಿ ಒಳ್ಳೆಯವರಂತೆ ನಡೆದುಕೊಂಡ ಅಭಿಲಾಷ್, ಕಳೆದ ಒಂದು ವರ್ಷದಿಂದ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಸೆ. 6ರಂದು ಮಗಳನ್ನು ಕೊಲೆ ಮಾಡಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡದ್ದಾಳೆ ಎಂದು ಬಿಂಬಿಸಿದ್ದಾರೆ. ಇವರಿಗೆ ಪೊಲೀಸರು ಸಹ ಬೆಂಬಲ ನೀಡಿದ್ದಾರೆ, ಎಂದು ಹರಿಶೇಷ ಆರೋಪಿಸಿದ್ದಾರೆ.