ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಯಾವ ವಾರ್ಡಿನಲ್ಲಿ ಯಾರಿಗೆ ಎಷ್ಟು ಮತ? ಇಲ್ಲಿದೆ ಸಂಪೂರ್ಣ ವಿವರ

Date:

Advertisements

ಕಡಬ ಪಟ್ಟಣ ಪಂಚಾಯತ್‌ನ 13 ವಾರ್ಡ್‌ಗಳಿಗೆ ಆ.17ರಂದು ಚುನಾವಣೆ ನಡೆದಿದ್ದು, ಇಂದು (ಆ.20) ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡಿದೆ. ಜಿದ್ದಾ ಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್‌ 8 ಸ್ಥಾನದಲ್ಲಿ ವಿಜಯಶಾಲಿಯಾಗಿದ್ದು, ಅಧಿಕಾರದ ಗದ್ದುಗೆಗೆ ಏರಿದೆ. ತೀವ್ರ ಪೈಪೋಟಿ ನೀಡಿರುವ ಬಿಜೆಪಿ ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಮೊದಲ ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮೂಲಕ ಹೊಸ ರಾಜಕೀಯ ಬೆಳವಣಿಗೆಗೆ ಕಡಬ ಸಾಕ್ಷಿಯಾಗಿದೆ. ಗೆಲುವು ದಾಖಲಿಸಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಒಟ್ಟು 13 ವಿಜೇತರಲ್ಲಿ ಐದು ಮಂದಿ ಮಹಿಳೆಯರು ಪಟ್ಟಣ ಪಂಚಾಯತ್‌ನ ಸದಸ್ಯರಾಗಿದ್ದಾರೆ.

ಯಾವ ವಾರ್ಡಿನಲ್ಲಿ ಯಾರಿಗೆ ಎಷ್ಟು ಮತ? ವಿಜೇತರ ವಿವರ ಹೀಗಿದೆ.

Advertisements

ವಾರ್ಡ್ 1-ಕಳಾರ:
ಹಿಂದುಳಿದ ವರ್ಗ ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮನ್ನಾ ಜಬೀನ್ 201 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಪ್ರೇಮಾ 0, ಎಸ್‌ಡಿಪಿಐನಿಂದ ಸಮೀರಾ ಹಾರಿಸ್ 74, ಪಕ್ಷೇತರರಾಗಿ ಜೈನಾಬಿ 139 ಮತಗಳನ್ನು ಪಡೆದಿದ್ದಾರೆ.

ಬಿಜೆಪಿಯಿಂದ ಸ್ಫರ್ಧಿಸಿದ್ದ ಪ್ರೇಮಾ ಅವರು ವಾರ್ಡ್‌ ಸಂಖ್ಯೆ 6-ಕಡಬ ವಾರ್ಡಿನಲ್ಲೂ ಸ್ಪರ್ಧಿಸಿದ್ದರು. ಅಲ್ಲದೇ, ಕಳಾರ ವಾರ್ಡಿನಲ್ಲಿ ಪಕ್ಷೇತರರಾಗಿದ್ದ ಜೈನಾಬಿ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಮುಸ್ಲಿಮ್ ಸಮುದಾಯದ ಮತದಾರರು ಈ ವಾರ್ಡಿನಲ್ಲಿ ಹೆಚ್ಚಾಗಿದ್ದರು. ಹೀಗಾಗಿ, ಅವರಿಗೆ ಒಂದೂ ಮತ ಕೂಡ ಪ್ರೇಮಾ ಅವರಿಗೆ ಬಿದ್ದಿಲ್ಲ. ಪ್ರೇಮಾ ಅವರು ಕಡಬ ವಾರ್ಡಿನಲ್ಲೂ ಗೆದ್ದಿಲ್ಲ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನೀಲಾವತಿ ಶಿವರಾಮ್ ಗೆದ್ದಿದ್ದಾರೆ.

ವಾರ್ಡ್ 2-ಕೋಡಿಬೈಲು:
ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಸುಮ ಅಂಗಡಿಮನೆ 187 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮೋಹಿನಿ 177 ಮತ ಪಡೆದಿದ್ದಾರೆ-4 ನೋಟಾ ಮತಗಳು ಬಿದ್ದಿವೆ.

kadaba congress

ವಾರ್ಡ್ 3-ಪನ್ಯ:
ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್ 320 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಆದಂ ಕುಂಡೋಳಿ 75, ಎಸ್‌ಡಿಪಿಐನಿಂದ ಹಾರಿಸ್ ಕಳಾರ 6, ಮುಸ್ಲಿಂ ಲೀಗ್‌ನಿಂದ ಕೆ. ಅಬ್ದುಲ್ ರಝಾಕ್ 2 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 4-ಬೆದ್ರಾಜೆ:
ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಮನ್ ಸಿ.ಜೆ 232 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ. 168 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 5-ಮಾಲೇಶ್ವರ:
ಹಿಂದುಳಿದ ವರ್ಗಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹನೀಫ್ ಕೆ.ಎಂ. 297 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಪ್ರಕಾಶ್ ಎನ್.ಕೆ.213 ಮತ ಪಡೆದಿದ್ದಾರೆ.

ಕಡಬ 1

ವಾರ್ಡ್ 6-ಕಡಬ:
ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್ 314 ಮತ ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಪ್ರೇಮಾ 176 ಮತ, ಪಕ್ಷೇತರರಾಗಿ ಆಲೀಸ್ ಚಾಕೊ 16, ಎಸ್‌ಡಿಪಿಐನಿಂದ ಸ್ವಾಲಿಯತ್ ಜಸೀರಾ 78 ಮತ ಪಡೆದಿದ್ದಾರೆ.

ವಾರ್ಡ್ 7-ಪಣೆಮಜಲು:
ಹಿಂದುಳಿದ ವರ್ಗ ಬಿ’ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೋಹಿತ್ ಗೌಡ 333 ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಗಣೇಶ್ ಗೌಡ 248 ಮತ ಪಡೆದಿದ್ದಾರೆ.

WhatsApp Image 2025 08 20 at 5.16.05 PM
ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳೊಂದಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ವಾರ್ಡ್ 8-ಪಿಜಕ್ಕಳ:
ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಬಿಜೆಪಿಯಿಂದ ದಯಾನಂದ ಗೌಡ ಪಿ. 386 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಅಶ್ರಫ್‌ ಶೇಡಿಗುಂಡಿ 184 ಮತಗಳನ್ನು ಪಡೆದಿದ್ದಾರೆ.

ವಾರ್ಡ್ 9-ಮೂರಾಜೆ:
ಹಿಂದುಳಿದ ವರ್ಗಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ 263 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ 235 ಮತ, 5 ನೋಟಾ ಮತಗಳು ಬಿದ್ದಿವೆ.

ಇದನ್ನು ಓದಿದ್ದೀರಾ? ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ವಾರ್ಡ್ 10-ದೊಡ್ಡಕೊಪ್ಪ:
ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿ ರಘುರಾಮ 393 ಮತ ಪಡೆದು ವಿಜಯಿಯಾಗಿದ್ದಾರೆ, ಕಾಂಗ್ರೆಸ್‌ನಿಂದ ತುಳಸಿ ಅವರಿಗೆ 258 ಮತ ಹಾಗೂ 9ನೋಟಾ ನತ ಬಿದ್ದಿದೆ.

ವಾರ್ಡ್ 11-ಕೋಡಿಂಬಾಳ:
ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ265 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಜ್ಯೋತಿ ಡಿ.ಕೋಲ್ಪೆ 255 ಮತ ಪಡೆದಿದ್ದಾರೆ.

ವಾರ್ಡ್ 12-ಮಜ್ಜಾರು:
ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ 306 ಮತ ಪಡೆದು ವಿಜಯಿಯಾಗಿದ್ದಾರೆ, ಕಾಂಗ್ರೆಸ್‌ನಿಂದ ಉಮೇಶ್ ಮಡ್ಯಡ್ಕ ಸ್ಪರ್ಧಿಸಿ 238 ಮತ ಪಡೆದಿದ್ದಾರೆ. 2 ನೋಟಾ ಮತಗಳು ಬಿದ್ದಿವೆ.

ವಾರ್ಡ್ 13-ಪುಳಿಕುಕ್ಕು:
ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೃಷ್ಣ ನಾಯ್ಕ 315 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಸ್ಪರ್ಧಿಸಿ 264 ಮತ ಪಡೆದಿದ್ದಾರೆ.

WhatsApp Image 2025 08 20 at 5.11.28 PM
ವಿಜೇತರಾದ ಎಲ್ಲ 13 ಮಂದಿ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಯಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಆ ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳೊಂದಿಗೆ ಗ್ರೂಪ್ ಫೋಟೋಗೆ ಫೋಸ್‌ ನೀಡಿದರು.
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X