ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿವಿಧ ಕಡೆ ಬಸ್ ಸೌಲಭ್ಯ ಒದಗಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಸಾರಿಗೆ ಇಲಾಖೆ ಶಹಾಪುರ ಉಪವಿಭಾಗದ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಶಹಾಪುರ-ಬೆಂಗಳೂರು ಹಾಗೂ ಶಹಾಪುರ-ಸೊಲ್ಲಾಪುರ-ಮಿರಾಜ್ ಮಧ್ಯೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು. ಯಾದಗಿರಿ ನಗರದಿಂದ ಸುರಪುರಕ್ಕೆ ಸಂಚರಿಸುವ ತಡರಹಿತ ಬಸ್‌ಗಳು ಹತ್ತಿಗೂಡುರ್ ಗ್ರಾಮದಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಮಹಿಳೆಯರು, ಹಿರಿಯರಿಗೆ ತೊಂದರೆಯಾಗುತ್ತಿದ್ದು, ಶಹಾಪುರ ನಗರದಿಂದ ಗೊಂದೇನೂರು ಕ್ರಾಸ್ ವರೆಗೆ ಸಂಜೆ 4:30 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ” ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಪ್ರಮುಖರಾದ ಶರಣರೆಡ್ಡಿ ಹತ್ತಿಗೂಡುರ್, ಕಂಡಪ್ಪ ಅಯ್ಯಳ್, ರವಿಕುಮಾರ್, ಬಸವರಾಜ ಪರಸಾಪುರ್ ಹಾಗೂ ವಿದ್ಯಾರ್ಥಿಗಳಿದ್ದರು.