ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೋಹಿತ್ ಈರಣ್ಣ ಮಣ್ಣಅಂಕಲಗಿ(15) ಮೃತ ವಿದ್ಯಾರ್ಥಿ. ಗುಟ್ಕಾ ತಿನ್ನಬೇಡ ಎಂದು ಅಜ್ಜಿ ಬೈದಿದ್ದಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿ ರೋಹಿತ್ ಅದೇ ಶಾಲೆಯ ಮುಖ್ಯ ಅಡುಗೆ ಸಹಾಯಕಿ ದಮಯಂತಿ ಮೊಮ್ಮಗ. ಕಳೆದ ಎಂಟು ವರ್ಷದಿಂದ ಅಜ್ಜಿಯ ಮನೆಯಲ್ಲೇ ನೆಲೆಸಿದ್ದ. ಅಫಜಲಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.