ʼಮಕ್ಕಳ ಕೈಯಲ್ಲಿ ಪೆನ್ನು ನೀಡುವ ಬದಲು ತಲ್ವಾರು ಕೊಡಿʼ ಎಂದು ಪ್ರಚೋದನಾತ್ಮಕ ಮಾಶಾಳ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಕ್ಫ್ ಹಠಾವೊ ದೇಶ ಬಚಾವೊ ಹೋರಾಟದಲ್ಲಿ ಭಾಗಿಯಾಗಿದ ಶ್ರೀಗಳು ಭಾಷಣ ಮಾಡುವ ಭರದಲ್ಲಿ ವಕ್ಫ ಬೋರ್ಡ್ ತೆಗೆಯದಿದ್ದರೆ ನಾವು ಜೀವ ಕೊಡುವುದಕ್ಕೂ ಸಿದ್ಧರಿದ್ದೇವೆ, ಜೀವ ತೆಗೆಯಲಿಕ್ಕೂ ಸಿದ್ಧದಿದ್ದೇವೆ ಎಂದರು.
ʼಎಲ್ಲ ಯುವಕರ ಬಳಿ ತಲ್ವಾರುಗಳಿವೆ. ಯಾರು ಬರುತ್ತಾರೋ ಅವರನ್ನು ತಲ್ವಾರುಗಳಿಂದ ಕಡಿಯುತ್ತೇವೆ ಎನ್ನುತ್ತಿದ್ದಾರೆ. ಹಾಗಾಗಿ, ಇನ್ನು ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡೋಣ ಎಂದಿದ್ದರು, ಇದನ್ನು ಬಿಎನ್‌ಎಸ್ ಕಾಯ್ದೆಯ ಅನುಸಾರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.