ಸ್ನೇಹಿತರೊಂದಿಗೆ ಈಜು ಕಲಿಯಲು ತೆರಳಿದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಹಾಬಾದ್ ಪಟ್ಟಣದ ಹೊರವಲಯದ ಗೋಳಾ(ಕೆ) ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗೋಳಾ (ಕೆ) ಗ್ರಾಮದ ನಿವಾಸಿ ಆಕಾಶ್ ಶಿವಾನಂದ್ ಅಷ್ಟಗಿ (25) ಮೃತರು.
ಮೃತ ಯುವಕ ಆಕಾಶ ಸ್ನೇಹಿತರೊಂದಿಗೆ ನದಿಯಲ್ಲಿ ಟ್ಯೂಬ್ ಸಹಾಯದಿಂದ ಈಜು ಕಲಿಯಲು ಹೋದ ವೇಳೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.