ಏ.14ರಂದು ನಡೆಯುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ಎಲ್ಲಾ ಕಿರಿಯ, ಹಿರಿಯ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಎಲ್ಲಾ ಶಿಕ್ಷಕರು, ಸಿಪಾಯಿಗಳು ಕಡ್ಡಾಯವಾಗಿ ಭಾಗವಹಿಸಿಬೇಕು. ಅಂಬೇಡ್ಕರ್ ಜಯಂತಿ ಆಚರಣೆಯ ಜಿಪಿಎಸ್ ಪೋಟೋ ತೆಗೆದು ಕಚೇರಿಗಳಲ್ಲಿ ಅಳವಡಿಸುವಂತೆ ದಲಿತ ಸಂಘರ್ಷ ಸಮಿತಿ ಜಂಟಿ ಸಮಿತಿ ಆಗ್ರಹಿಸಿದೆ.
ಅಂಬೇಡ್ಕರ್ ಜಯಂತಿ ಆಚರಣೆಯ ಜಿಪಿಎಸ್ ಫೋಟೊಗಳನ್ನು ದಸಂಸ ಸಂಘಟನೆಗಳ ಗಮನಕ್ಕೆ ತರುವಂತೆ ಆದೇಶಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ (ಮಾವಳ್ಳಿ ಶಂಕರ ಹಾಗೂ ಗುರುಪ್ರಸಾದ ಕೆರೆಗೂಡು) ತಾಲೂಕಾ ಜಂಟಿ ಸಮಿತಿ ವತಿಯಿಂದ ಜೇವರ್ಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಸಂಚಾಲಕ ಸಿದ್ರಾಮ್ ಕಟ್ಟಿ ಮಾತನಾಡಿ, ʼಏಪ್ರಿಲ್ 10 ರಂದು ಶಾಲಾ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳುತ್ತಿದ್ದು. ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮದಿನೋತ್ಸವ ಅಂಗವಾಗಿ ಸರಕಾರದ ಆದೇಶದಂತೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಎಲ್ಲಾ ಕಿರಿಯ, ಹಿರಿಯ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಸಿಪಾಯಿಗಳು ಕಡ್ಡಾಯವಾಗಿ ಹಾಜರಿರಬೇಕು.
ಜಿಪಿಎಸ್ ಫೋಟೋ ತೆಗೆಯುವ ಮುಖಾಂತರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಆಚರಿಸುವಂತೆ ಆದೇಶಿಸಿ, ಜಿಪಿಎಸ್ ಫೋಟೋ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಗೆ ಹಾಗೂ ನಮ್ಮ ಸಂಘಟನೆಗೆ ಸಲ್ಲಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಕಲಬುರಗಿ | ಅಪ್ರಾಪ್ತರಿಗೆ ಬೈಕ್ : ಪೋಷಕರಿಗೆ ₹75 ದಂಡ
ಸಂಘಟನೆಯ ಪ್ರಮುಖರಾದ ಸಿದ್ದು ಕೆರೂರ್, ಶ್ರೀಹರಿ ಕರಕಳ್ಳಿ, ಜೈಭೀಮ್ ನರಿಬೊಳ, ಶರಣು ಲಖಣಾಪುರ, ಶಿವಕುಮಾರ್ ಹೆಗಡೆ, ಸಂಗಣ್ಣ ಹೊಸಮನಿ, ರೇವಣಸಿದ್ದ ಬಿರಾಳ, ಯಶ್ವವಂತ ಬಡಗೇರ, ಶ್ರೀಮಂತ ಕೀಲೆದಾರ, ಭೀರಲಿಂಗ ಕಲ್ಲೂರ ಇದ್ದರು.