ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಹಾಬಾದ್ ಸಮೀಪದ ಸಣ್ಣೂರ ರಸ್ತೆಯ ಮಾಡಬೂಳ ತಾಂಡಾ ಬಳಿ ನಡೆದಿದೆ.
ಮಾಡಬೂಳ ತಾಂಡಾದ ಸತೀಶ್ ನೇಜು ರಾಠೋಡ (30) ಮೃತರು.
ಮೃತ ಸತೀಷ ಮಂಗಳವಾರ ಸಂಜೆ ಸಹೋದರಿಯನ್ನು ಭಂಕೂರ ಕ್ರಾಸ್ ನಲ್ಲಿ ಬಿಟ್ಟು ಹಿಂತಿರುಗಿ ಹೋಗುವಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಸಚಿವ ಜಮೀರ್ ಅಹ್ಮದ್‌ಖಾನ್ ರಾಜೀನಾಮೆ ನೀಡುವರೆಗೂ ಹೋರಾಟ : ಛಲವಾದಿ ನಾರಾಯಣಸ್ವಾಮಿ