ಮದುವೆ ಆಮಂತ್ರಣ ಪತ್ರ ನೀಡಲು ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಸೇಡಂ ತಾಲೂಕಿನ ಮಳಖೇಡ ಬಳಿ ನಡೆದಿದೆ.
ರವಿವಾರ ಬೆಳಿಗ್ಗೆ ಜರುಗಿದ ದುರ್ಘಟನೆಯಲ್ಲಿ ಮಹೇಶ್ (32), ಪ್ರೇಮ್‍ಕುಮಾರ್ (25), ಅನ್ನದಾನಯ್ಯ (25) ಮೃತಪಟ್ಟಿದ್ದಾರೆ.
ಸೇಡಂ ಕಡೆಯಿಂದ ಗುಂಡಗುರ್ತಿ ಕಡೆಗೆ ಹೊರಟಿರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಿತ್ಯಾನಂದ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ
ಈ ಸಂಬಂಧ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.