ಕಲಬುರಗಿ ಜಿಲ್ಲೆ ಸೇಡಂ ಮುಖ್ಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲಿಸಿರುವ ಲಾರಿ ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸೇನೆ ವಲಯ ಅಧ್ಯಕ್ಷ ಭಗವಾನ್ ಬೋಚಿನ್ ಅವರು ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಮಳಖೇಡ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಿದರು.
“ಮಳಖೇಡ ಪಟ್ಟಣದ ಆದಿತ್ಯನಗರದಲ್ಲಿ ರಾಜಶ್ರೀ ಸಿಮೆಂಟ್ ಕಂಪೆನಿ ಇರುವುದರಿಂದ ಕಂಪೆನಿಗೆ ಲಾರಿಗಳು ಹೆಚ್ಚಾಗಿ ಸಂಚಾರ ಮಾಡುತ್ತವೆ. ರಾತ್ರಿ ವೇಳೆ ಸಾಲು ಸಾಲಾಗಿ ಸೇಡಂ ಮುಖ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ಬೆಳಗಿನ ಜಾವದವರೆಗೆ ಲಾರಿಗಳನ್ನು ನಿಲ್ಲಿಸಿರುತ್ತಾರೆ. ಇದರಿಂದ ಜನರಿಗೆ ಮತ್ತು ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಬೈಕ್ ಸವಾರರಿಗೆ, ಸೈಕಲ್ ಸವಾರರಿಗೆ, ಎತ್ತಿನ ಗಾಡಿಗಳು ಅದೇ ರಸ್ತೆ ಮೂಲಕ ಸಂಚಾರ ಬೆಳೆಸುತ್ತವೆ. ವಿದ್ಯಾರ್ಥಿಗಳು ಅದೇ ರಸ್ತೆ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗುಬೇಕು. ಈ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ?” ಎಂದಿದ್ದಾರೆ.
“ಇಂದಿರಾನಗರದಲ್ಲಿ ತಿರುವು ಇರುವುದರಿಂದ ಗಾಡಿಗಳು ಯು ಟರ್ನ್ ಮಾಡಿಕೊಂಡು ಹೋಗುತ್ತವೆ ಇದರಿಂದ ಸೈಕಲ್ ಮೋಟಾರ್ ಆಗಿರಬಹುದು ಹಾಗೂ ಎತ್ತಿನ ಬಂಡಿ ಆಗಿರಬಹುದು ಅಪಘಾತ ಸಂಭವಿಸಬಹುದು. ಹಾಗಾಗಿ ಕೂಡಲೇ ಎಲ್ಲ ಲಾರಿಗಳನ್ನು ತೆರವುಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಕೃಷಿ ಭೂಮಿಯಲ್ಲಿ ಟವರ್ ನಿರ್ಮಾಣ; ರೈತರು-ಕೆಪಿಟಿಸಿಎಲ್ ಅಧಿಕಾರಿಗಳ ನಡುವೆ ವಾಗ್ವಾದ
ಅಬ್ದುಲ್ ರಹಿಮಾನ್, ಅನ್ಸರ್, ಶಿವರಾಜ್ ಸಂಗವಿ, ಎಂ ಡಿ ಶಕೀಲ್, ರಾಚಯ್ಯ ಸ್ವಾಮಿ, ಸುನಿಲ್ ದೊಡ್ಡಮನಿ ಇದ್ದರು.
