ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಾಗ್ಧರಿ ಗ್ರಾಮಕ್ಕೆ ಬಸ್ಸಿನ ಸಂಚಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿ ವತಿಯಿಂದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ಜಿಲ್ಲಾ ಸಂಚಾಲಕ ಕಾಶಿನಾಥ ಶೆಳಗಿ ಮಾತನಾಡಿ, ಆಳಂದ ತಾಲೂಕಿನ ವಾಗ್ಧರಿ ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲ. ಸದರಿ ಊರಿನ ಗ್ರಾಮಸ್ಥರು, ಮಹಿಳರು ಮತ್ತು ವಿದ್ಯಾರ್ಥಿಗಳು ಕಲಬುರಗಿ ನಗರಕ್ಕೆ ಹೋಗಿ ಬರಲು ಬಹಳ ತೊಂದರೆ ಎದುರಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ-ಕಾಲೇಜುಗಳಿಗಾಗಿ ಆಳಂದ ಮತ್ತು ಕಲಬುರಗಿ ಪಟ್ಟಣಕ್ಕೆ ಹೋಗುತ್ತಾರೆ. ಬಸ್ಸಿನ ಸೌಕರ್ಯವೇ ಇಲ್ಲ. ಊರಿನ ಜನರು ವಾಗ್ಧರಿಯಿಂದ ಕಮಲಾ ನಗರಕ್ಕೆ 5 ಕೀ.ಮೀ. ಕಾಲ್ನಡಿಗೆ ಮೂಲಕ ಹೋಗಿ, ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.

ಬಸ್ಸಿನ ಸೌಕರ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನಾನುಕೂಲತೆ ಆಗುತ್ತಿದೆ. ಸಾಯಂಕಾಲವಾದರೆ ವಾಗ್ಧರಿಗೆ ಗ್ರಾಮಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಹಾಗಾಗಿ, ವಾಗ್ಧರಿ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಕೊಡಗು | ಪ್ರೇಯಸಿ ಪತಿಯ ಕೊಲೆಗೆ ಯತ್ನಿಸಿದ ಪೊಲೀಸ್ ಪೇದೆ!
ಒಂದು ವೇಳೆ ಮಾಡದೇ ಹೋದರೆ ಮುಂದೆ ದಿನಗಳಲ್ಲಿ ಕಚೇರಿಯ ಮುಂದೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂ. ಸಂಚಾಲಕರಾದ ದಿಲಿಪಕುಮಾರ ಕಿರಸವಾಳಗಿ, ಜಿಲ್ಲಾ ಸಂಚಾಲಕಿ ಅಶ್ವಿನಿ ಬಾರಿಗಿಡ, ನಗರ ಸಂಚಾಲಕರು ಗಣೇಶ ಕಾಂಬಳೆ, ಪರಶುರಾಮ , ಪ್ರಜ್ವಲ್, ಕೀರ್ತಿರಾಜ್ ಕೊಹಿನೂರ್, ಭೀಮರಾವ್ ವಿಬಿ, ಭರತ್ ಸೇರಿದಂತೆ ಗ್ರಾಮದ ಜನರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
