ಬೌದ್ಧರ ಐತಿಹಾಸಿಕ ಸ್ಥಳ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ 500 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ದಿಪಡಿಸಿ ಅಂತಾರಾಷ್ಟ್ರೀಯ ತಾಣವಾಗಿ ಮಾಡಬೇಕೆಮದು ಒತ್ತಾಯಿಸಿ ಕಲಬುರಗಿ ಜಿಲ್ಲೆಯ ಸೇಡಂನ ಭಾರತೀಯ ಬೌದ್ಧ ಮಹಾಸಭಾದಿಂದ ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ರೇವಣಸಿದ್ದಪ್ಪ ಸಿಂಧೆ ಮಾತನಾಡಿ, “ಕರ್ನಾಟಕದಲ್ಲಿ ಕಲೆ ಸಾಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಸರ್ಕಾರವು ಅನೇಕ ಪ್ರಾಧಿಕಾರಗಳಿಗೆ ಮೂಲಭೂತ ಸೌಕರ್ಯ ಮತ್ತು ಸದರಿ ಪ್ರಾಧಿಕಾರಗಳ ವ್ಯಾಪ್ತಿ ಪ್ರದೇಶವನ್ನು ಅಭಿವೃದ್ಧಿಪಡಿಸಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳಾಗಿ ಪರಿವರ್ತನೆಗೆ ತಮ್ಮ ಘನ ಸರ್ಕಾರದ ಪ್ರಯತ್ನ ಶ್ಲಾಘನೀಯ” ಎಂದರು.
“ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕನಗನಹಳ್ಳಿ, ಸನ್ನತಿ, ಯಾದಗಿರಿ ಜಿಲ್ಲೆಯ ಶಾಹಪುರ್, ಹೀಗೆ ಅನೇಕ ಪ್ರದೇಶಗಳಲ್ಲಿ ಕಾರ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಸಿ ಮಿಶ್ರ ವಿಖ್ಯಾತ ಬೌದ್ಧ ಧರ್ಮದ ಬಗ್ಗೆ ಅನೇಕ ಶಿಲಾ ಶಾಸನಗಳು ಪ್ರಿಯದರ್ಶಿ ಸಾಮ್ರಾಜ್ಯ ಅಶೋಕರ ಕಾಲವನ್ನು ನೆನಪಿಸುವ ಶಾಸನಗಳು ಅಲ್ಲಿ ಸ್ವತಃ ಸಾಮ್ರಾಟ್ ಅಶೋಕ ರಾಜ ಮತ್ತು ಅವರ ಮಗ ಮಹೇಂದ್ರ ಕೊಟ್ಟ ಅನೇಕ ಶಿಲಾ ಲೇಖನಗಳು ಪಾಲಿ ಭಾಷೆಗಳಲ್ಲಿ ದೊರಕಿರುವುದು ರಾಜ್ಯ ರಾಷ್ಟ್ರಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿರುವುದು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದೆ” ಎಂದರು.
“ರಾಜ್ಯ ಸರ್ಕಾರವು ಬೌದ್ಧ ಪಾರಂಪರೆಯ ಕಲೆ ಸಾಹಿತ್ಯ ರೂಪಿಸಿ ಅಭಿವೃದ್ಧಿಪಡಿಸಲು ಸನ್ನತಿ ಪ್ರಾಧಿಕಾರ ರಚಿಸಲಾಗಿ ಇದರ ಜತೆಯಲ್ಲಿ ಕೂಡಲಸಂಗಮ ಮತ್ತು ಬಸವಕಲ್ಯಾಣ ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಹವಾಗಿದೆ. ಆದರೆ ಬಸವಕಲ್ಯಾಣ ಮತ್ತು ಕೂಡಲಸಂಗಮ ಪ್ರಾಧಿಕಾರಗಳಿಗೆ ನೀಡಲಾದ ಅಭಿವೃದ್ಧಿ ಅನುದಾನ ಸನ್ನತಿ ಪ್ರಾಧಿಕಾರಕ್ಕೆ ನೀಡಿಲ್ಲ. ರಾಜ್ಯ ಬೌದ್ಧ ಉಪಾಸಕ/ಉಪಾಸಕಿಯರಿಗೆ ನೋವುಂಟುಮಾಡಿದೆ” ಎಂದು ಅವಲತ್ತುಕೊಂಡರು.
“ಈ ಹಿಂದೆ ಸಂಘಟನೆಗಳು ಖುದ್ದಾಗಿ ಅನುದಾನ ನೀಡುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದರೂ ಕೂಡಾ ಇದೇ ತಿಂಗಳು ಸೆಪ್ಟೆಂಬರ್ 17ರಂದು ನಡೆದ ಸಚಿವ ಸಂಪುಟದಲ್ಲಿ ಸನ್ನತಿ ಪ್ರಾಧಿಕಾರಕ್ಕೆ ಅಭಿವೃದ್ಧಿಗಾಗಿ ಅನುದಾನ ನೀಡಿಲ್ಲ” ಎಂದು ಆರೋಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಬಾಣಸಂದ್ರದ ಡಾ.ಎ.ಜೆ.ಲೋಕೇಶ್ ಅಧಿಕಾರ ಸ್ವೀಕಾರ
“ನಮ್ಮ ಸೇಡಂ ತಾಲೂಕಿನ ರಾಜ್ಯ ಬೌದ್ಧ ಉಪಾಸಕ ಮತ್ತು ಉಪಾಸಕಿಯರ ಪರವಾಗಿ ಭಾರತೀಯ ಬೌದ್ಧ ಮಹಾಸಭಾದಿಂದ ಸನ್ನತಿ ಪ್ರಾಧಿಕಾರಕ್ಕೆ 500 ಕೋಟಿ ಹಣ ಬಿಡುಗಡೆ ಮಾಡಲು ತಾವು ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
ಕೈಲಾಸ, ಗೌತಮ್, ಮಾರುತಿ ಅಳ್ಳೊಳಿ, ಬಸವಂತ ರೆಡ್ಡಿ, ಸಿದ್ದು, ಮಹಾವೀರ, ರಾಜು ಕಟ್ಟಿ, ಚಂದ್ರಶೇಖರ ಕಟ್ಟಿಮನಿ, ಆಕಾಶ, ಸಿದ್ದು ಉಡಗಿ ಸೇರಿದಂತೆ ಇತರರು ಇದ್ದರು.