ಅನಧಿಕೃತ ಬೈಕ್, ಟ್ಯಾಕ್ಸಿ ಮತ್ತು ಅನಧಿಕೃತ ಆಟೋಗಳ ಸಂಚಾರ ತಡೆಯುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘ (ರಿ) ಕಲಬುರಗಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
‘ಕಲಬುರಗಿ ನಗರದಲ್ಲಿ ಅನಧಿಕೃತವಾಗಿ ಬೈಕ್, ಟ್ಯಾಕಿ ಸೇವೆ ನೀಡುತಿದ್ದಾರೆ. ಈ ಹಾವಳಿಯಿಂದ ಪರವಾನಿಗೆ ಪಡೆದ ಆಟೋ ಚಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ. ಮೊದಲೇ ಸರಕಾರದ ಶಕ್ತಿ ಯೋಜನೆಯಿಂದ ಶೇ 50ರಷ್ಟು ಆದಾಯ ಕುಸಿದಿದೆ ಎಂದು ಹೇಳಿದರು.
ʼಒಂದು ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಆಟೋಗಳಿದ್ದು, ತಾಲೂಕು ಪರವಾನಿಗೆ ಪಡೆದು ನಗರದಲ್ಲಿ ಸಂಚರಿಸುತ್ತಿರುವ ಸುಮಾರು ಎರಡು ಸಾವಿರ ವರೆಗೆ ಆಟೋಗಳಿವೆ. ಇದರಿಂದ ನಗರ ಪರವಾನಿಗೆ ಪಡೆದ ಆಟೋ ಚಾಲಕರಿಗೆ ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಮತ್ತು ಆಟೋಗಳ ಬ್ಯಾಂಕ್ ಸಾಲ ಪಾವತಿಸಲು ತುಂಬಾ ಸಮಸ್ಯೆಯಾಗುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ನಗರದಲ್ಲಿ ಸಂಚರಿಸುತ್ತಿರುವ ಅನಧಿಕೃತ ಬೈಕ್, ಟ್ಯಾಕ್ಸಿ ಮತ್ತು ಅನಧಿಕೃತ ಆಟೋಗಳ ಸಂಚಾರ ಕೂಡಲೇ ತಡೆದು ನಗರ ಪರವಾನಿಗೆ ಪಡೆದ ಆಟೋ ಚಾಲಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ : ಕಲಬುರಗಿ | ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ
ಆಟೋ ಚಾಲಕರ ಸಂಘದ ಪ್ರಮುಖರಾದ ಲಕ್ಷ್ಮೀಕಾಂತ ಆರ್ ಮಾಲಿಪಾಟೀಲ್, ಪರಶುರಾಮ ಕೋಸಗಿ, ಎಮ್.ಡಿ.ಹುಸೇನ್, ಹಣಮಂತ ಇನ್ನಿತರರು ಉಪಸ್ಥಿತರಿದ್ದರು.