ಕವಿ, ಲೇಖಕ ಹಾಗೂ ಶಿಕ್ಷಕ ಡಾ. ಚಿದಾನಂದ ಕುಡ್ಡನ್ನ ಅವರನ್ನು ಕಲಬುರಗಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ (ದಸಾಪ) ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ದಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅವರ ಆದೇಶದ ಮೇರೆಗೆ ಕಲಬುರಗಿ ವಿಭಾಗದ ಸಂಚಾಲಕ ಎಚ್.ಎಫ್. ಮಸ್ಕಿ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಡಾ. ಚಿದಾನಂದ ಕುಡ್ಡನ್ನ ಅವರು ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಂದಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕಲಬುರಗಿಯ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಗಣ್ಯರು ಅವರನ್ನು ಅಭಿನಂದಿಸಿ ಸನ್ಮಾನಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ‘ಕ್ರಾಂತಿಯ ಧ್ವಜವಾಹಕ ಪ್ರವಾದಿ ಮುಹಮ್ಮದ್’ ಕುರಿತು ವಿಶೇಷ ಪ್ರವಚನ
ಈ ಸಂದರ್ಭದಲ್ಲಿ ಡಾ. ಮೀನಾಕ್ಷಿ ಬಾಳಿ, ಡಾ. ಜಯದೇವಿ ಗಾಯಕವಾಡ, ನೀಲಾ ಕೆ., ಅರ್ಜುನ ಭದ್ರೆ, ಮರಿಯಪ್ಪ ಹಳ್ಳಿ, ಡಾ. ಗವಿಸಿದ್ದಪ್ಪ ಪಾಟೀಲ, ಡಾ. ರಾಜಕುಮಾರ ಮಾಳಗೆ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬಿಗೇರ, ಪ್ರಿಯಾಂಕಾ ಮಾವಿನಕರ, ಶಶಿಕಲಾ ಪಾಟೀಲ, ಶೀಲಾ ಕಟಕೆ, ಶರಣಮ್ಮ, ಡಾ. ಕೈಲಾಸ ಡೋಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





