ಕಲಬುರಗಿ ನಗರದ ರಾಜಾಪುರ ರಸ್ತೆಯಲ್ಲಿರುವ ಸರಕಾರಿ ಬಾಲಕರ ವಸತಿ ನಿಲಯಗಳ (ಪ.ಜಾ, ಪ.ಪಂ) ಸಂಕೀರ್ಣ ಬಾಬು ಜಗಜೀವನ್ ರಾಮ್ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.
ʼಬಾಬು ಜಗಜೀವನ್ ರಾಮ್ ವಸತಿ ನಿಲಯ ದುಸ್ಥಿತಿ ಹಾಸ್ಟೆಲ್ ಕಟ್ಟಡ ಮೇಲಿಂದ ಹಾಕಿರುವ ಡೈನೇಜ್ ಪೈಪ್‌ನ ನೀರು ಆವರಣಕ್ಕೆ ಹರಿಯುವುದು, ಕಿಟಕಿಗಳು ಒಡೆದಿವೆ. ದುರ್ನಾತದಿಂದ ನೊಣಗಳ ಕಾಟ ಹೆಚ್ಚಾಗಿ ಗಬ್ಬು ವಾಸನೆ ನಾರುತ್ತಿದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ಹಿಂಸೆ ಅನುಭವಿಸುವಂತಾಗಿದೆʼ ಎಂದು ದೂರಿದರು.
ʼಹಾಸ್ಟೆಲ್‌ನಲ್ಲಿ ತಯಾರಿಸುವ ಆಹಾರದಲ್ಲಿ ನಿತ್ಯವೂ ಒಂದಿಲ್ಲೊಂದು ವಸ್ತು ಪತ್ತೆಯಾಗುತ್ತದೆ. ಊಟ ಮಾಡುವ ಆಹಾರದಲ್ಲಿ ಹುಳಗಳು, ಜಿರಳೆ, ಗುಟ್ಕಾ, ಸಿಗರೇಟ್ ಸೇದಿರುವ ಕಾಗದ ಕಾಣುತ್ತವೆ. ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ತಯಾರಿಸುತ್ತಾರೆ. ಅಡುಗೆ ಕೋಣೆಯಲ್ಲಿ ತರಕಾರಿ, ದವಸ ಧಾನ್ಯಗಳು ಕೀಟ, ನೊಣಗಳ ಪಾಲಾಗುತ್ತಿವೆ. ಅಡುಗೆ ಸಿಬ್ಬಂದಿ ತಂಬಾಕು, ಗುಟ್ಕಾ, ಮದ್ಯಪಾನ ಸೇವನೆ ಮಾಡುತ್ತಲೇ ಅಡುಗೆ ತಯಾರಿಸುತ್ತಾರೆʼ ಎಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸಿದರು..
ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಪ್ರೀತಿ ದೊಡ್ಡಮನಿ ಮಾತನಾಡಿ, ʼಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು, ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ನೀಡಲು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ ಕೋಟೆಯಲ್ಲಿ ವಿಶ್ವ ಯೋಗ ದಿನಾಚರಣೆ ; ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗಿ
ದಲಿತ ವಿದ್ಯಾರ್ಥಿ ಪರಿಷತ್ ನ ನಗರ ಘಟಕದ ಅಧ್ಯಕ್ಷ ಸಚಿನ್, ಪ್ರಮುಖರಾದ ಆನಂದ, ಪ್ರವೀಣ, ಚೇತನ್ ಕುಮಾರ್, ವಾಯ್ ಎಸ್ ಸಿಂದಗೇರಿ ಅಲ್ಲದೇ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.