ಶಾಂತಿ ಪ್ರಿಯರ ಜಿಲ್ಲೆಯಾಗಿರುವ ಕಲಬುರಗಿಯಲ್ಲಿ ಕೋಮುವಾದವನ್ನು ಹರಡಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದನ್ನು ತಡೆಗಟ್ಟಲು ಕೋಮುವಾದಿ ವ್ಯಕ್ತಿಗಳನ್ನು ಜಿಲ್ಲೆಯಿಂದಲೇ ಹೊರಹಾಕಬೇಕು ಎಂದು ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್ ಅಸೋಸಿಯೇಷನ್ ಸದಸ್ಯ ಡಾ. ನಂದಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, “ವಿದ್ಯಾರ್ಜನೆ ಸ್ಥಳವಾದ ಶೈಕ್ಷಣಿಕ ಕೇಂದ್ರದಲ್ಲಿ ತಮ್ಮ ಮಲ ತುಂಬಿರುವ ಕೊಳಕು ಬುದ್ಧಿಯ ಮೂಲಕ ಇನ್ನಷ್ಟು ವಿಶ್ವವಿದ್ಯಾಲಯವನ್ನು ಹಾಳು ಮಾಡಲು ಹೊರಟಿರುವ ಶ್ರೀರಾಮ ಸೇನೆಯ ಅಧ್ಯಕ್ಷ ಆದೋಲನ ಸ್ವಾಮಿ ಮತ್ತು ಅವರಂತೆ ಅಸಂಹಿಷ್ಣೆತೆ ಹುಟ್ಟು ಹಾಕುತ್ತಿರುವ ಮತಾಂಧ ಕೋಮುವಾದಿ ವ್ಯಕ್ತಿಗಳನ್ನು ಜಿಲ್ಲೆಯಿಂದ ಹೊರಹಾಕಬೇಕು ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
‘ಹಿಂದೂ ನಾವೆಲ್ಲಾ ಒಂದು’ ಬೊಗಳೆ ಬಿಡುವ ಮತಾಂಧ, ಕೋಮುವಾದಿ ಆದೋಲನ ಸ್ವಾಮಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದಾಗ, ಬಿಜೆಪಿ ಮುಖಂಡ ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ, ಈ ಭಾಗದ ದಲಿತ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳು ದಾಖಲಾದಾಗ ಬಾಯಿ ಬಿಡಲಿಲ್ಲ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮತಗಳ್ಳತನ | ಚುನಾವಣಾ ಆಯೋಗ ಬಿಜೆಪಿ ಏಜೆಂಟ್: ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
‘ಇದೀಗ ಅನಾವಶ್ಯಕ ಸಂಗತಿಗಳನ್ನು ಮುನ್ನೆಲೆಗೆ ತಂದು ದಲಿತ ಸಮುದಾಯದ ವಿದ್ಯಾರ್ಥಿನಿಯ ಸಾವು ಮತ್ತು ಅಸ್ಪೃಶ್ಯ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾವನ್ನು ಮರೆಮಾಚಲು ಕುತಂತ್ರ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇವರನ್ನು ಜಿಲ್ಲೆಯಿಂದ ಹೊರ ಹಾಕದ್ದಿದರೆ ಮುಂದಾಗುವ ಅನಾಹುತಗಳಿಗೆ ಅಮಾಯಕರು ಬೆಲೆ ತೆರಬೇಕಾಗಬಹುದು ಎಂದು ನಂದಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.