ಬೀಜ ಗೊಬ್ಬರ ಮಾರಾಟ ಮಳಿಗೆಯ ಮುಂದೆ ರೈತರು ತಮ್ಮ ಸರದಿಗಾಗಿ ಚಪ್ಪಲಿ, ಕಲ್ಲುಗಳನ್ನಿರಿಸಿ ಮಳಿಗೆ ಬಾಗಿಲು ಮುಂದೆ ಕಾದು ಕುಳಿತ ದೃಶ್ಯ ಇಂದು ಜೇವರ್ಗಿ ಪಟ್ಟಣದ ಬಿಜಾಪುರ ಕ್ರಾಸ್ ಬಳಿ ಕಂಡುಬಂದಿದೆ.
ಜೇವರ್ಗಿ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಬಿತ್ತನೆ ಬೀಜ ಹಾಗೂ ಯೂರಿಯಾ ಸೇರಿದಂತೆ ಡಿಎಪಿ ರಸ ಗೊಬ್ಬರ ಖರೀದಿಸಲು ಗ್ರಾಮಗಳ ರೈತರು ಹಾಗೂ ಮಹಿಳೆಯರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತಡವಾಗಿ ಖರೀದಿಸಲು ಹೋದರೆ ನನಗೆ ಬೀಜ ಗೊಬ್ಬರ ಸಿಗುವುದಿಲ್ಲವೆಂದು ನಾ ಮುಂದು ತಾ ಮುಂದು ಎಂಬಂತೆ ಜೇವರ್ಗಿ ತಾಲೂಕಿನ ಬಿಜಾಪುರ್ ಕ್ರಾಸಿನ ಬಳಿ ಇರುವ ಬೀಜ ಗೊಬ್ಬರ ಮಾರಾಟ ಮಳಿಗೆ ಮುಂದೆ ರೈತರು ಬೆಳಗಿನಿಂದಲೇ ತಮ್ಮ ಕಾಲಿನ ಚಪ್ಪಲಿ ಹಾಗೂ ಕಲ್ಲುಗಳನ್ನು ಸರದಿ ಸಾಲಿನಲ್ಲಿ ಇರಿಸಿ ತಮ್ಮ ಪಾಳಿಗಾಗಿ ಕಾಯುತ್ತಿದ್ದು, ಬೆಳ್ಳಂ ಬೆಳಗ್ಗೆ ಕಂಡು ಬಂದ ದೃಶ್ಯವಾಗಿದೆ.

ಸಂಬಂಧಪಟ್ಟ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ತಾಲೂಕುಗಳಿಂದ ಹಾಗೂ ಶಾಸಕರು ಸಹ ರೈತರಿಗೆ ನೆರವಿಗೆ ಬರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಶಾಸಕರು ಕೂಡ ಮೌನವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.