ಕಲಬುರಗಿ | ಸಚಿವ ಪ್ರಿಯಾಂಕ್‌ ಖರ್ಗೆಗೆ ನಿಂದನೆ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ವಿರುದ್ಧ ಎಫ್‌ಐಆರ್

Date:

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಮೇ 25ರಂದು ತಮ್ಮ‌ ಫೇಸ್‌ಬುಕ್ ಖಾತೆಯಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿರುವುದನ್ನು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತ ಹಣಮಂತ ಸಂಕನೂರು ಅವರು ನೀಡಿರುವ ದೂರಿನ ಮೇರೆಗೆ ಮಣಿಕಂಠ ರಾಠೋಡ್ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ʼಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರು ತಮ್ಮ‌ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಏಕ ವಚನದಲ್ಲಿ ಸಂಬೋಧಿಸಿ ಅವಹೇಳನ ಮಾಡಿದ್ದಾರೆ. ಸಮಾಜದಲ್ಲಿನ ಸಾರ್ವಜನಿಕ ಶಾಂತಿ ಕದಡಿಸುವ, ಸಮಾಜದಲ್ಲಿ ಅಶಾಂತಿ ಮೂಡಿಸುವ ಸಂಚು ಮಣಿಕಂಠ ರೂಪಿಸಿದ್ದಾರೆʼ ಎಂದು ದೂರು ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ಚಮಚಾಗಳು ಎಂದು ಹೇಳುವ ಮೂಲಕ‌ ಪೊಲೀಸ್ ಇಲಾಖೆಯ ಘನತೆ, ಗೌರವಕ್ಕೆ ಧಕ್ಕೆಯುಂಟು ಮಾಡಿ ಸಾರ್ವಜನಿಕವಾಗಿ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ʼಮಹಾಮಾರಿʼ ಅಲ್ಲ; ರೂಪಾಂತರಿ ವೈರಸ್ ಅಪಾಯಕಾರಿಯಾಗಿಲ್ಲ- ವೈದ್ಯರ ಸ್ಪಷ್ಟನೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು

"ನಮ್ಮ ವ್ಯವಸ್ಥೆಯು ನಗರ ಪ್ರದೇಶವನ್ನು ಬಹಳ ಲಘುವಾಗಿ ತೆಗೆದುಕೊಂಡಿದೆ. ಆದರೆ ವಾಸ್ತವದಲ್ಲಿ...

ಬಸವಕಲ್ಯಾಣ | ಸೇತುವೆ ಮೇಲೆ ಬೃಹತ್ ಗುಂಡಿ : ಸಂಚಾರಕ್ಕೆ ತೀವ್ರ ಸಮಸ್ಯೆ

ಬಸವಕಲ್ಯಾಣ ನಗರದಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ...

ಕಮಲ್‌ ಹಾಸನ್‌ ಎಂಬ ಅಜ್ಞಾನಿಯಿಂದ ಕನ್ನಡಕ್ಕೆ ಅವಮಾನ: ಇಂಥವರಿಗೆ ನಿರ್ಲಕ್ಷ್ಯವೇ ಮದ್ದು

ನಟ ಶಿವರಾಜ್ ಕುಮಾರ್‌ ಅವರಿಗೆ ಕನ್ನಡ ಭಾಷಾ ಜ್ಞಾನದ ತಿಳಿವಳಿಕೆ ಇದ್ದಿದ್ದರೆ...

ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರವು ವಿಶೇಷ ಗಮನಹರಿಸಲಿ: ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ತಮಜಲಿನಲ್ಲಿ ಅಬ್ದುಲ್ ರಹ್ಮಾನ್ ಎಂಬ...

Download Eedina App Android / iOS

X