ಶಾಲೆ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಿ ರಚಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಲಬುರಗಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಎದುರು ಪ್ರತಿಭಟನೆ ನಡೆಸಲಾಯಿತು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ ಮಾತನಾಡಿ, “ಕಾಲೇಜಿನ ಕ್ಯಾಂಪಸ್‌ನಲ್ಲಿ ನಾವು ಸುರಕ್ಷಿತವಾಗಿಲ್ಲದಿದ್ದರೆ, ಇನ್ನೆಲ್ಲಿ ನಾವು ಸುರಕ್ಷಿತವಾಗಿರಲು ಸಾಧ್ಯ. ಮೋದಿ ಸರ್ಕಾರದ ಪ್ರಸ್ತುತ ಆಡಳಿತದಲ್ಲಿ ದೇಶಾದ್ಯಂತ ಅನೇಕ ಕಾಲೇಜು ಕ್ಯಾಂಪಸ್‌ಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಘಟನೆಗಳು ನಡೆಯುತ್ತಿರುವು ಸಾಮಾನ್ಯ ಸಂಗತಿಗಳಾಗಿವೆʼ ಎಂದು ಬೇಸರ ವ್ಯಕ್ತಪಡಿಸಿದರು.
“ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ಕಾಲೇಜಿನ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆದುಕೊಂಡೊಯ್ದು ಅತ್ಯಾಚಾರ ನಡೆಸಿರುವ ಪ್ರಕರನ ಬೆಳಕಿಗೆ ಬಂದಿದೆ. ಅಪರಾಧಿಗಳನ್ನು ಈಗಾಗಲೇ ಬಂದಿಸಲಾಗಿದೆ. ಆದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಸರಿಯಾದ ತನಿಖೆಯನ್ನು ಮಾಡಬೇಕಿದೆ. ಸರಿಯಾದ ತನಿಖೆ ನಡೆಸದಿದ್ದರೆ ಆರೋಪಿಗಳು ತಪ್ಪಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆದರಿಂದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ತನಿಖೆ ನಡೆಸಬೇಕುʼ ಎಂದು ಆಗ್ರಹಿಸಿದರು.
“ಒಡಿಶಾದ ಫಕೀರ್ ಮೋಹನ್ ಕಾಲೇಜಿನಲ್ಲಿ ಇತ್ತೀಚೆಗೆ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕ್ಯಾಂಪಸ್‌ಗಳಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಪಶ್ಚಿಮ ಬಂಗಾಳದ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾಲೇಜಿನ ಯೂನಿಯನ್ ಕಚೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶಾಲೆಯೊಳಗೆ, ಬೆರಳಚ್ಚುಗಳ ರೂಪದಲ್ಲಿ ಒಪ್ಪಿಗೆ ಪಡೆದ ನಂತರ, ಮುಟ್ಟಿನ ತಪಾಸಣೆಗಾಗಿ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು. ಈ ಘಟನೆಗಳ ತೀವ್ರವಾಗಿ ವಿರೋಧಿ ವ್ಯಕ್ತವಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು” ಆರೋಪಿಸಿದರು.
“ಅಪರಾಧಿಗಳ ವಿರುದ್ಧ ದೂರು ದಾಖಲಿಸಿದ ನಂತರವೂ ಫಕೀರ್ ಮೋಹನ್ ಕಾಲೇಜಿನಲ್ಲಿ ಬಲಿಪಶು ತೀವ್ರವಾದ ಸುಟ್ಟಗಾಯಗಳಿಗೆ ಒಳಗಾಗಿ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದ್ದರೂ ಸಹ ಅಪರಾಧಿಗಳ ವಿರುದ್ಧ ದೂರು ದಾಖಲಿಸಿದ ನಂತರವೂ ಆರೋಪಿಯನ್ನು ರಕ್ಷಿಸುವ ಮೂಲಕ ಸರ್ಕಾರ ಆರೋಪಿಯ ಪರವಾಗಿ ನಿಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪಶ್ಚಿಮ ಬಂಗಾಳದ ಕ್ಯಾಂಪಸ್‌ಗಳ ಒಳಗೆ ಟಿಎಂಸಿ ಸ್ಥಾಪಿಸಿರುವ ಯೂನಿಯನ್ ಕಚೇರಿಗಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ಹಿಂಸೆಯನ್ನು ನೀಡಲು ನಿರ್ದಿಷ್ಟವಾದ ಜಾಗ ಸ್ಥಾಪಿಸಲಾಗಿದೆಯೇ ಎಂಬ ಪ್ರೆಶ್ನೆ ಉದ್ಭವವಾಗುತ್ತದೆ” ಎಂದರು.
“ಬಿಜೆಪಿ ಮತ್ತು ಟಿಎಂಸಿ ಮಾದರಿಯ ಶಿಕ್ಷಣ ಸಂಸ್ಥೆಗಳು ಸುರಕ್ಷತೆ ಮತ್ತು ಭದ್ರತೆಯ ಕೊರತೆಯಿರುವ ಸ್ಥಳಗಳಾಗುತ್ತಿವೆ, ಅಲ್ಲಿ ಬದುಕುಳಿದ ಬಲಿಪಶುಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಮನುಸ್ಮೃತಿ ವಿಚಾರಗಳನ್ನು ಅಳವಡಿಸುವ ಮತ್ತು ಜಾರಿ ಮಾಡಲು ಮುಂದಾಗುತ್ತಿವೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ವಿರೋಧಿಸುತ್ತದೆʼ ಎಂದರು,
ಬೇಡಿಕೆಗಳೇನು ?
ದೇಶದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆ ನಾಶಮಾಡಿಬೇಕು. ಕ್ಯಾಂಪಸ್‌ಗಳಲ್ಲಿ GSCASH ( Gender Sensitization Committee against Sexual Harassment) ಅನ್ನು ಖಚಿತಪಡಿಸಬೇಕು ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿ ಸಂಘಗಳನ್ನು ಖಚಿತಪಡಿಸಿಕೊಂಡು ವಿದ್ಯಾರ್ಥಿನಿಯರಿಗೆ ಲೈಗಿಕ ಕಿರುಕುಳ ಮತ್ತು ತೊಂದರೆ ನೀಡುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.
ಈ ಸುದ್ದಿ ಓದಿದ್ದೀರಾ? ಬೀದರ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬಸ್ ಸೌಲಭ್ಯ : ಜು.19 ರಂದು ಚಾಲನೆ
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷರು ಪ್ರೇಮ್, ಜಿಲ್ಲಾ ಸಮಿತಿ ಸದಸ್ಯರಾದ ಹುಲಗಮ್ಮ ಮಾಲಾಶ್ರೀ ಮತ್ತು ಕಾಲೇಜ್ ವಿದ್ಯಾರ್ಥಿಗಳು ಹಾಜರಿದ್ದರು.