ಕಲಬುರಗಿ | ವಿದ್ಯಾರ್ಥಿನಿಗೆ ಗುಲ್ಬರ್ಗಾ ವಿವಿ ಉಪನ್ಯಾಸಕನಿಂದ ಲೈಂಗಿಕ ಕಿರುಕುಳ; ತಡವಾಗಿ ಬೆಳಕಿಗೆ ಬಂದ ಪ್ರಕರಣ

Date:

Advertisements

ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 6 ತಿಂಗಳ ಹಿಂದೆ ಕಿರುಕುಳ ನೀಡಲಾಗಿದೆ ಎನ್ನಲಾದ ಆಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.

ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಅದೇ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರು ಕರೆ ಮಾಡಿ ಸುಮಾರು 23 ನಿಮಿಷ ಮಾತನಾಡಿರುವ ಆರು ತಿಂಗಳ ಹಿಂದಿನದು ಎನ್ನಲಾದ ಮೊಬೈಲ್‌ ಆಡಿಯೋ ವೈರಲ್ ಆಗಿದೆ.

ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕನೊಬ್ಬ ತನ್ನ ವಿಭಾಗದ ವಿದ್ಯಾರ್ಥಿನಿಗೆ ರಾತ್ರಿ ಸಮಯದಲ್ಲಿ ಕರೆ ಮಾಡಿ ಮಂಚಕ್ಕೆ ಕರೆದಿದ್ದಾನೆ. ಆ ವಿದ್ಯಾರ್ಥಿನಿ ಎಷ್ಟೇ ಬಾರಿ ‌ʼನೋ ಸರ್ʼ ಎಂದು ವಿರೋಧಿಸಿದ್ದರೂ ಆಕೆಯನ್ನು ಸುಮ್ಮನೆ ಬಿಡದ ಭೂಪ “ನೀನು ನನ್ನ ಗರ್ಲ್ ಫ್ರೆಂಡ್, ನನಗೆ ಇಂಟ್ರೆಸ್ಟ್‌ ಇದೆ. ನನ್ನ ರಿಕ್ವೆಸ್ಟ್‌ ಒಪ್ಪಿಕೋ” ಎಂದು ಹೇಳಿರುವುದು ಆಡಿಯೋದಲ್ಲಿರುವುದು ತಿಳಿದುಬಂದಿದೆ.

Advertisements

“ನನ್ನಿಂದ ಏನೂ ತೊಂದರೆ ಆಗಲ್ಲ, ನೀ ನನಗೆ ಸಹಕರಿಸು. ನನ್ನ ರೂಮಿಗೆ ಕರೆಯುತ್ತೇನೆ. ರೂಮಿಗೆ ಬಾ ಕಿಸ್ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡು. ನನ್ನ ಹಗ್‌ ಮಾಡು, ಮೊದಲು ನನಗೆ ಹತ್ತಿರವಾಗು, ಮುಂದೆ ನೋಡೋಣ” ಎಂದು ಪೀಡಿಸಿದ್ದಾನೆ. ಆದರೆ. ಆಕೆ ಎಲ್ಲದಕ್ಕೂ ನೋ‌ ಸರ್ ಎಂದೆ ಉತ್ತರ ಕೊಟ್ಟಿರುವುದು ಆಡಿಯೋದಲ್ಲಿದೆ.

“ನೀವು ನಮಗೆ ಸರಿಯಾಗಿ ಗೈಡ್‌ ಮಾಡಬೇಕು. ಒಳ್ಳೆಯ ಮಾರ್ಗದರ್ಶನ ನೀಡಬೇಕು. ನೀವು ಏನಾದರೂ ಮಾಡಿದರೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುತ್ತೀರಿ” ಎಂದು ವಿದ್ಯಾರ್ಥಿನಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕನಿಗೆ 3 ವರ್ಷ ಕಠಿಣ‌ ಜೈಲು ಶಿಕ್ಷೆ

ವಿಶ್ವವಿದ್ಯಾಲಯದ ಘನತೆ ಹಾಳು ಮಾಡಿದ ಅತಿಥಿ ಶಿಕ್ಷಕನ ವಿರುದ್ಧ ಕ್ಯಾಂಪಸ್​ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಈವರೆಗೂ, ಆ ಅತಿಥಿ ಉಪನ್ಯಾಸಕರ ವಿರು‍ದ್ಧ ಪೊಲೀಸ್‌ ಠಾಣೆಯಲ್ಲಿಯಾಗಲಿ ಅಥವಾ ವಿವಿ ಕುಲಪತಿಗಾಗಲಿ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯನ್ನು ಪೊಲೀಸರು ಇನ್ನೂ ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಾಗಿದೆ.

ಗುಲಬರ್ಗಾ ವಿವಿ ಹಂಗಾಮಿ ಕುಲಪತಿ ಪ್ರೊ. ವಿ ಟಿ ಕಾಂಬಳೆ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದು, “ಆಡಿಯೋ ಕುರಿತು ಗಮನಕ್ಕೆ ಬರುತ್ತಿದ್ದಂತೆ ಎಂಬಿಎ ವಿಭಾಗದ ಮುಖ್ಯಸ್ಥರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವಿಭಾಗದ ಮುಖ್ಯಸ್ಥರು ಹೊಸದಾಗಿ ಬಂದಿದ್ದು, ಅವರಿಗೂ ಯಾವುದೇ ಮಾಹಿತಿ ಇಲ್ಲ. ಆಡಿಯೋ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X