ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದು ಅಪಾರ ಹಾನಿಯುಂಟಾಗಿರುವ ಘಟನೆ ಶನಿವಾರ ನಡೆದಿದೆ.
ದಂಡೋತಿ ಗ್ರಾಮದ ಮುಹಮ್ಮದ್ ರಸೂಲ್ ಸಾಬ್ ಡೋಂಗಾ ಹಾಗೂ ಪುಥಲಿ ಬೇಗಂ, ಹುಸೇನ್ ಸಾಬ್ ಡೋಂಗಾ ಎನ್ನುವವರ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಮಳೆಗೆ ಮನೆಗೆ ಹಾನಿಯಾದ ಕಾರಣ ಮುಹಮ್ಮದ್ ರಸೂಲ್ ಸಾಬ್ ಡೋಂಗಾ ಹಾಗೂ ಪುಥಲಿ ಬೇಗಂ ಅವರಿಗೆ ಆಶ್ರಯ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ʼನಮ್ಮ ಇಬ್ಬರ ಸಹೋದರರ ಒಟ್ಟು ನಾಲ್ಕು ಕೋಣೆಗಳು ಮನೆಗಳು ಮಳೆಗೆ ಕುಸಿದು ಬಿದ್ದಿವೆ. ಎರಡು ಮನೆಯಲ್ಲಿ ಒಟ್ಟು ಎಂಟು ಜನ ವಾಸವಾಗಿದ್ದು, ಗೋಡೆ ಕುಸಿತದಿಂದ ಆಶ್ರಯ ಇಲ್ಲದಂತಾಗಿದೆʼ ಎಂದು ʼಈದಿನʼದೊಂದಿಗೆ ತಮ್ಮ ಅಳಲು ತೋಡಿಕೊಂಡರು.
ವಿಷಯ ತಿಳಿದು ಗ್ರಾಮ ಪಂಚಾಯತ್ ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.