ಶೀಲ ಶಂಕಿಸಿ ಪತ್ನಿ ಕೊಂದ ಪತಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಚಿಂಚೋಳಿ ತಾಲ್ಲೂಕಿನ ಇರಕಪಳ್ಳಿಯ ರವಿಶಂಕರ ಶಿಕ್ಷೆಗೆ ಒಳಗಾದ ಅಪರಾಧಿ. ಪತ್ನಿ ನವೀತಾ ಕೊಲೆಗೀಡಾದವರು.
ಒಂದೇ ಗ್ರಾಮದವರಾದ ನವೀತಾ ಮತ್ತು ರವಿಶಂಕರ ಮದುವೆಯಾದ ವರ್ಷದಲ್ಲೇ ದಂಪತಿ ಮಧ್ಯೆ ಮನಸ್ತಾಪ ಉಂಟಾಗಿದೆ. 2017ರ ನ.22ರಂದು ಇರಕಪಳ್ಳಿ ಮನೆಯಲ್ಲಿ ರವಿಶಂಕರ ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಹಿಸುಕಿ ಕೊಂದು ಓಡಿ ಹೋಗಿದ್ದನು.
ಈ ಸಂಬಂಧ ಸುಲೇಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಕರಣ ಗುಜ್ವಾರ್ ಅವರು ಅಪರಾಧಿಗೆ ಜೀವಾವಧಿ ಸೆರೆವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ 4ನೇ ಅಪರ ಸರ್ಕಾರಿ ಅಭಿಯೋಜಕ ಕೆ.ಆರ್.ನಾಗರಾಜ ಅವರು ವಾದ ಮಂಡಿಸಿದ್ದರು.