ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳ ಹೋಬಳಿ ಘಟಕದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ(ಡಿಎಂಎಸ್‌ಎಸ್) ಹೋಬಳಿ ಅಧ್ಯಕ್ಷ ಭೀಮು ಮುಧೋಳ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಲಬುರಗಿ ನಗರದ ಕೋಟನೂರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮುಧೋಳ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಶೆಟ್ಟರ್ ನಡೆಯಿಂದ ಬೆಳಗಾವಿಯಲ್ಲಿ ಅಂಗಡಿ ಕುಟುಂಬದ ಟಿಕೆಟ್ ಭದ್ರ?
ಈ ಸಂದರ್ಭದಲ್ಲಿ ಡಿಎಂಎಸ್ಎಸ್ ಅಶೋಕ್ ಫಿರಂಗಿ, ಗೌರವಾಧ್ಯಕ್ಷರು ನರಸಿಂಹಲು ರಾಜೋಳ್ಳಿ, ಉಪಾಧ್ಯಕ್ಷ ಮಾರುತಿ ಗಜಲಪುರ್, ರಮೇಶ್ ಗಜಲಪುರ್, ಲಕ್ಷ್ಮಣ್ ಜಾಕನ್ಪಲ್ಲಿ, ಚಂದ್ರಪ್ಪ ಉಪ್ಪಾರ್, ತಮ್ಮಪ್ಪ ಬಾಗಳಿ, ನರೇಶ್ ಬಾಗಳಿ, ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ಇದ್ದರು.