ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಂವಿಧಾನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಪೇಜಾವರ ಶ್ರೀಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಆಳಂದ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು.
ಆಳಂದ ಪಟ್ಟಣದ ಹೊರವಲಯದ ತಹಸೀಲ್ದಾರ್ ಕಚೇರಿ ಮುಂದೆ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕಾಧ್ಯಕ್ಷ ರಮೇಶ ಲೋಹಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬರೆದ ಹಕ್ಕೊತ್ತಾಯ ಪತ್ರವನ್ನು ಗ್ರೇಡ್ -2 ತಹಸೀಲ್ದಾರ್ ಬಿ.ಜಿ.ಕುದರಿ ಅವರಿಗೆ ಸಲ್ಲಿಸಿದರು.
ಮಹಾಸಭಾ ಜಿಲ್ಲಾ ಮುಖಂಡ ರಾಜಶೇಖರ ಯಂಕಂಚಿ ಮಾತನಾಡಿ, ‘ಇಡೀ ವಿಶ್ವಕ್ಕೆ ಸಮಾನತೆ ಬೋಧಿಸಿದ ಬಸವಣ್ಣನವರ ಹೆಸರಿಟ್ಟುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಅವರಿಗೆ ಕಲ್ಯಾಣ ಕ್ರಾಂತಿಯ ಬಗ್ಗೆ ಅರಿವಿಲ್ಲ. ಬಸವಣ್ಣನವರ ವಿರುದ್ಧ ಹೇಳಿಕೆ ನೀಡಿರುವುದು ಖಂಡನಾರ್ಹವಾಗಿದೆ’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪ್ರಮೋದ್ ಮುತಾಲಿಕ್ ಸೇರಿ ಮೂವರು ಭಾಗವಹಿಸುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ನಿರ್ಬಂಧ
ಪ್ರತಿಭಟನೆಯಲ್ಲಿ ಮಹಾಸಭಾದ ತಾಲ್ಲೂಕಾಧ್ಯಕ್ಷ ರಮೇಶ ಲೋಹಾರ, ಶಾಂತಿವನ ಚರ್ಚ್ ಫಾಧರ್ ಸಂತೋಷ, ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ನಿವೃತ್ತ ಶಿಕ್ಷಕ ಧರ್ಮಣ್ಣಾ ಪೂಜಾರಿ, ಕರ್ನಾಟಕ ದಲಿತ ಸೇನೆಯ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಜಿಡ್ಡೆ, ಎ.ಆರ್.ಬೇಗ್, ರಮೇಶ ಜಗತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.