ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಯುವಕ ಭಾನುವಾರ ಬೆಳಿಗ್ಗೆ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿ ನಗರದ ಬಸವೇಶ್ವರ ಕಾಲೊನಿ ಬಳಿ ನಡೆದಿದೆ.
ನಗರದ ಕೆಬಿಎನ್ ದರ್ಗಾ ಪ್ರದೇಶದ ನಯಾ ಮೊಹಲ್ಲಾದ ನಿವಾಸಿ ಮುಝಮಿಲ್ ಸಿದ್ದೀಕ್ ಅಹ್ಮದ್(18) ಮೃತ ದುರ್ದೈವಿ. ಶನಿವಾರ ರಾತ್ರಿ ಮನೆಗೆ ಮರಳದ ಕಾರಣ, ಪಾಲಕರು ತಡರಾತ್ರಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಎಂ ಬಿ ನಗರ ಸಮೀಪದ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅರಕಲಗೂಡು ದಸರಾ ಮಹೋತ್ಸವ: ಬೂಕರ್ ಪ್ರಶಸ್ತಿ ವಿಜೇತ ಅನುವಾದಕಿ ದೀಪಾ ಬಸ್ತಿಗೆ ಆಹ್ವಾನ
ಈ ಸಂಬಂಧ ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರಿವುದಾಗಿ ತಿಳಿದುಬಂದಿದೆ.