ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲು ತೀರಿಸಲು ಸಾಧ್ಯವಾಗದೆ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
ವರದಾ ನಗರದ ನಿವಾಸಿ, ಪೆಟ್ ಶಾಪ್ ಅಂಗಡಿಯ ವ್ಯಾಪಾರಿ ಅವಿನಾಶ ರಕ್ಕಸಗಿ ಆತ್ಮಹತ್ಯೆ ಮಾಡಿಕೊಂಡವರು. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್‌ಲೈನ್‌ನಲ್ಲಿ ಜೂಜಾಡುತ್ತಿದ್ದ ಅವಿನಾಶ, ಬಹಳಷ್ಟು ಸಾಲ ಮಾಡಿ ಕೊಂಡಿದ್ದರು. ಜೂಜಾಟಕ್ಕೆ ಮಾಡಿದ್ದ ಸಾಲ ತೀರಸಲು ಆಗದೆ ಮನನೊಂದು ಮನೆಯಲ್ಲಿ ನೇಣುಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.