ನಗರದ ಶಕ್ತಿನಗರ ಬಡಾವಣೆಯಲ್ಲಿ ಜೈಭೀಮ್ ತರುಣ್ ಸಂಘ (ರಿ) ವತಿಯಿಂದ ಗುರುವಾರ ಅಶೋಕ ವಿಜಯದಶಮಿ ಪ್ರಯುಕ್ತ ಪಂಚಶೀಲ ಧ್ವಜಾರೋಹಣ ಹಾಗೂ ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಾಬು ಚವ್ಹಾಣ್ ಮಾತನಾಡಿ, ಅಶೋಕ ವಿಜಯದಶಮಿ ದಿನವು ನಮ್ಮಲ್ಲಿ ಸಮಾನತೆಯ ಹಾದಿಯಲ್ಲಿ ನಡೆಯುವ ಶಕ್ತಿಯನ್ನು ತುಂಬುತ್ತದೆ. ಬಾಬಾಸಾಹೇಬರ ಕನಸುಗಳು, ಆಶಯಗಳು ಕೇವಲ ಆಚರಣೆಯ ಮಟ್ಟದಲ್ಲೇ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ಸಮಾಜದಲ್ಲಿ ನಿಜವಾದ ಬದಲಾವಣೆ ತರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ದೈವತಾ ಘಂಟೆ ಅವರು ತಮ್ಮ ನುಡಿಯಲ್ಲಿ, ಪಂಚಶೀಲ ತತ್ವಗಳು ಮಾನವೀಯತೆಯ ಜೀವಾಳ. ಇವುಗಳ ಅನುಸರಣೆ ಮೂಲಕವೇ ಶಾಂತಿ, ಬಾಂಧವ್ಯ ಮತ್ತು ಸಹೋದರತ್ವವನ್ನು ನಾವು ಸಮಾಜದಲ್ಲಿ ಬೆಳೆಸಬಹುದು. ಅಂಬೇಡ್ಕರ್ ಮತ್ತು ಬುದ್ಧರ ತತ್ವಗಳು ಇಂದಿನ ಸಮಾಜಕ್ಕೆ ದಾರಿ ತೋರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್ ಖರ್ಗೆ
ಪ್ರದೇಶಾಧ್ಯಕ್ಷ ಬಾಬು ಚವ್ಹಾಣ್ ಮತ್ತು ದೈವತಾ ಘಂಟೆ ಅವರ ಸಮ್ಮುಖದಲ್ಲಿ ಪಂಚಶೀಲ ಮತ್ತು ಬಾಬಾಸಾಹೇಬರ ನೀಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಧ್ವಜಾರೋಹಣದ ನಂತರ ಎಲ್ಲರೂ ಸೇರಿ ಬುದ್ಧ ವಂದನೆ ಹಾಗೂ ಭಕ್ತಿಪೂರ್ಣ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಮಹಾಪಣ್ಣ ದೊಡ್ಡಮನಿ, ಸುಧಾಕರ್ ನೂಲಕರ್, ಹರ್ಷ ಎಂ. ತಾಲ್ವಾರ್, ಶಕ್ತಿನಗರದ ಬೌದ್ಧ ಅನುಯಾಯಿಗಳು, ಮಹಿಳೆಯರು ಮತ್ತು ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.