ಗ್ರಾಮ ಪಂಚಾಯತ ಸಾಮಾನ್ಯ ಸಭೆಯ ನಡವಳಿ ಧಿಕ್ಕರಿಸಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಕಳಪೆಯಾಗಿ ನಿರ್ಮಿಸುತ್ತಿರುವ ಪಿಡಿಒ ಮಮತಾ ಎಸ್. ಗೋಗಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಗ್ರಾ.ಪಂ ಸದಸ್ಯರು, ಮುಖಂಡರು ಸೇಡಂ ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ʼಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೋಟ್ನಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಈ ಮೊದಲು ಸರಕಾರಿ ಶಾಲೆಯ ಹತ್ತಿರ ನಿರ್ಮಿಸಲು ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಎಲ್ಲ ಗ್ರಾಮ ಪಂಚಾಯತ ಸದಸ್ಯರ ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಆದರೆ ಪಿಡಿಒ ಅವರು ಗ್ರಾಮ ಪಂಚಾಯತ ಸಾಮಾನ್ಯ ಸಭೆಯ ನಡವಳಿ ಗಾಳಿಗೆ ತೂರಿ ಗ್ರಾಮದ ಬೇರೆಡೆ ಘಟಕ ನಿರ್ಮಾಣಕ್ಕೆ ಮುಂದಾಗಿ ಕಳಪೆ ಕಾಮಗಾರಿ ಕೈಗೊಂಡಿದ್ದಾರೆ. ಗ್ರಾಮಸ್ಥರ ವಿರೋಧದ ನಡುವೆಯೂ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ನಡಾವಳಿಯಲ್ಲಿ ನಿರ್ಧಾರದಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಉಗ್ರ ಹೋರಾಟ ನಡೆಸುತ್ತೇವೆʼ ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯತ ಸದಸ್ಯೆ ಲಕ್ಷ್ಮೀಬಾಯಿ ದೊಡ್ಡಮನಿ, ಗ್ರಾಮ ಪಂಚಾಯತ ಸದಸ್ಯೆ ಮಹಾನಂದ ಪಂಚಾಕ್ಷರಿ, ಮಾಜಿ ಗ್ರಾ.ಪಂ. ಸದಸ್ಯ ವೀರಭದ್ರಪ್ಪ ಹುಣಚಳ್ಳಿ, ಮಾಜಿ ಗ್ರಾ.ಪಂ. ಸದಸ್ಯ ವೈಜುನಾಥ ಮುದ್ದಾ, ದಶರಥ ಹಲಕರ್ಟಿ, ಶಿವರಾಜ ಅಣ್ಣಪಗೋಳ ಉಪಸ್ಥಿತರಿದ್ದರು.