ಕಲಬುರಗಿ | ಕಾರಾಗೃಹದಲ್ಲಿ ಕೈದಿಗಳ ಗಲಾಟೆ; ಒಬ್ಬನಿಗೆ ಗಂಭೀರ ಗಾಯ

Date:

Advertisements

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಗಲಾಟೆ ನಡೆದು, ಒಬ್ಬ ಕೈದಿ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಗಲಾಟೆಯಲ್ಲಿ ಕೈದಿಯೊಬ್ಬರು ಮತ್ತೊಬ್ಬ ಕೈದಿಯ ಕತ್ತಿಗೆ ಹರಿತ ವಸ್ತುವಿನಿಂದ ಇರಿದಿದ್ದರಿಂದ ಕೈದಿ ಇಸ್ಮಾಯಿಲ್ ಮೌಲಾನಾಸಾಬ್ (37) ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆ ನಡೆಸಿದವರು ಹಸನ್ ಶೇಖ್ (48) ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಲಬುರಗಿ | ಕಾರಾಗೃಹದಲ್ಲಿ ಕೈದಿಗಳ ಗಲಾಟೆ; ಒಬ್ಬರಿಗೆ ಗಂಭೀರ ಗಾಯ

Advertisements

ಗಾಯಗೊಂಡ ಇಸ್ಮಾಯಿಲ್ ಮೌಲಾನಾಸಾಬ್ ರವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಮೂಲದ ಇಸ್ಮಾಯಿಲ್ ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಹಸನ್ ಶೇಖ್ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಘಟನೆಯ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸಾಲಬಾಧೆ : ಮನೆಯಲ್ಲಿ ನೇಣಿಗೆ ಶರಣಾದ ರೈತ

ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಟಗುಪ್ಪಾ...

ಬಾಗಲಕೋಟೆ | ʼಆಶ್ರಯʼದಡಿ 500 ಮನೆ ನಿರ್ಮಾಣಕ್ಕೆ ಸರ್ಕಾರ ಆದೇಶ: ಶಾಸಕ ವಿಜಯಾನಂದ ಕಾಶಪ್ಪನವರ

ಆಶ್ರಯ ಯೋಜನೆಯಡಿ 500 ಮನೆಗಳ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ ಎಂದು...

ಬದುಕು ಸಂಭ್ರಮವಾಗಿಸೋಣ; ಹಬ್ಬಗಳ ಅಂದಗಾಣಿಸೋಣ!

ಇತ್ತೀಚೆಗೆ ಕಾಟಾಚಾರದಂತಾಗಿರುವ ಹಬ್ಬಗಳು ಸಪ್ಪೆ ಅನಿಸತೊಡಗಿವೆ. ಆ ದಿನಗಳ‌ ಸಂಭ್ರಮ ಮೆಲುಕು...

ಧಾರವಾಡ | ನವಜಾತ ಗಂಡು ಮಗುವಿನಲ್ಲಿ ಭ್ರೂಣ ಪತ್ತೆ

ನವಜಾತ ಶಿಶುವಿನೊಳಗೆ ಮತ್ತೊಂದು ಮಗು (ಭ್ರೂಣ) ಇರುವ ಪ್ರಕರಣ ಹುಬ್ಬಳ್ಳಿಯ ಕರ್ನಾಟಕ...

Download Eedina App Android / iOS

X