ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇಡಂ ತಾಲೂಕಿನ ಐತಿಹಾಸಿಕ ಪ್ರಸಿದ್ಧ ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡ ಕೋಟೆಯ ಗೋಡೆ ಮತ್ತೆ ಕುಸಿದುಬಿದ್ದಿದೆ.
ಸೇಡಂ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಮತ್ತು ಬುಧವಾರ ರಾತ್ರಿ ಜೋರು ಮಳೆಯಾಗಿದ್ದು, ಸತತ ಮಳೆಗೆ ಐತಿಹಾಸಿಕ ಮಳಖೇಡ ಕೋಟೆಯ ಗೋಡೆ ತೇವಗೊಂಡಿದ್ದು, ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಕೋಟೆಯ ಗೋಡೆ ಏಕಾಏಕಿ ನೆಲಕ್ಕುರುಳಿದೆ.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಸಮರ್ಪಕವಾದ ಆಹಾರ ಸೇವಿಸಿದರೆ ಉತ್ತಮ ಆರೋಗ್ಯ: ನ್ಯಾಯಾಧೀಶೆ ಎಂ. ಭಾರತಿ
ರಾಷ್ಟ್ರಕೂಟರ ಮಳಖೇಡ ಕೋಟೆ ಗೋಡೆ ಉರುಳಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ತಿಂಗಳ ಆಗಸ್ಟ್ 31ರಂದು ಸಹ ಸತತ ಮಳೆಗೆ ಕೋಟೆಯ ಗೋಡೆ ಉರುಳಿ ಬಿದ್ದಿತ್ತು.