ನಿವೃತ್ತ ನರ್ಸ್ ಎಡವಟ್ಟಿನಿಂದ ಬಾಣಂತಿ, ನವಜಾತ ಶಿಶು ಬಲಿಯಾಗಿದ್ದಾರೆ ಎಂಬ ಆರೋಪ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕೇಳಿಬಂದಿದೆ.
ಇಂಗಳಗಿ ಗ್ರಾಮದ ನಿವಾಸಿ ಶ್ರೀದೇವಿ ಪ್ರಭಾನೂರ್ (28) ಎಂಬ ಬಾಣಂತಿ, ನವಜಾತ ಶಿಶು ಮೃತಪಟ್ಟಿದ್ದಾರೆ.
ಜೂ.13ರಂದು ಮಹಿಳೆಯು ನಿವೃತ ಆರೋಗ್ಯ ಸಹಾಯಕಿ ಗಂಗುಬಾಯಿ ಅವರ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದರು. ಈ ವೇಳೆ ಸಮಪರ್ಕ ಚಿಕಿತ್ಸೆ ಸಿಗದಕ್ಕೆ ಬಾಣಂತಿ, ಮಗು ಕೊನೆಯುಸಿರೆಳೆದಿದ್ದಾರೆ. ನಿವೃತ್ತ ನರ್ಸ್ ಎಡವಟ್ಟಿನಿಂದಲೇ ತಾಯಿ ಹಾಗೂ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನರ್ಸ್ ವಿರುದ್ಧ ಕ್ರಮ ಜರುಗಿಸುವಂತೆ ವಾಡಿ ಪೊಲೀಸರಿಗೆ ಮೃತ ಮಹಿಳೆಯ ಪತಿ ದೂರು ನೀಡಿದ್ದಾರೆ.