ವ್ಯಕ್ತಿಯೋರ್ವ ಗುಂಡಿಯೊಳಗೆ ಕುಳಿತು ಉಪವಾಸ ನಡೆಸುತ್ತಿದ್ದು, ಐದು ದಿನಕ್ಕೆ ಕಾಲಿಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ(ಕೆ) ಗ್ರಾಮದ ಬೆಳ್ಳಿಗುತ್ತಿ ದೇವಸ್ಥಾನದಲ್ಲಿ ಕಂಡುಬಂದಿದೆ.
ಬಸವರಾಜ ಹಣಮಂತ ಸಜ್ಜನ ಎಂಬುವವರು ಐದು ಅಡಿ ಉದ್ದ & ಐದು ಅಡಿ ಎತ್ತರ ತಗ್ಗು ಗುಂಡಿ ಅಗೆದು ಅಲ್ಲಿ ಧ್ಯಾನ ಮಾಡುತ್ತಿದ್ದಾರೆ. ಲೋಕದ ಒಳತಿಗಾಗಿ 21 ದಿನಗಳ ಕಾಲ ಕುಳಿತು ಊಟ, ನೀರು ಸೇವಿಸದೆ ತಾನು ಧ್ಯಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
“ಗಾಳಿ, ಬೆಳಕು ಪ್ರವೇಶಿಸದಂತೆ ಗುಂಡಿಯನ್ನು ಮುಚ್ಚಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸುತ್ತ ಮುತ್ತಲಿನ ಗ್ರಾಮಗಳ ಜನರು ದೇವಸ್ಥಾನದತ್ತ ಧಾವಿಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡಿಯೊಳಗೆ ಗಾಳಿ, ಬೆಳಕು ಬೀಳುವಂತೆ ಮಾಡಿದ್ದು, ಗುಂಡಿ ಸುತ್ತ ಹಾಕಿದ್ದ ಬಂಡೆಗಳನ್ನು ತೆಗೆದುಹಾಕಿದ್ದಾರೆ. 21 ದಿನಗಳ ಉಪವಾಸ ಮುಂದುವರೆದಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
ವರದಿ – ಸಿಟಿಜ಼ನ್ ಜರ್ನಲಿಸ್ಟ್: ಮೈಲಾರಿ ದೊಡ್ಡಮನಿ
