ಸುಮಾರು 15 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕಿ, ಬೇರೊಂದು ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಶಿಕ್ಷಕಿಯನ್ನು ಬೀಳ್ಕೊಡುವಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ.
ಕಲಬುರಗಿ ಜಿಲ್ಲೆಯ ಭೀಮಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಅಂಬಿಕಾ ಕುಲಕರ್ಣಿ ಅವರು 2008ರಿಂದ ಸೇವೆ ಸಲ್ಲಿಸಿದ್ದು, ಇದೀಗ ವರ್ಗಾವಣೆಯಾಗಿದ್ದಾರೆ.
ನೆಚ್ಚಿನ ಶಿಕ್ಷಕಿ ತಮ್ಮ ಶಾಲೆಯಿಂದ ಬೇರೊಂದು ಶಾಲೆಗೆ ವರ್ಗಾವಣೆ ಆಗಿದ್ದರಿಂದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಶಾಲೆಯಿಂದ ಹೊರಡುವಾಗ ಅವರನ್ನು ಸುತ್ತುವರೆದ ವಿದ್ಯಾರ್ಥಿಗಳು, ಕಣ್ಣೀರು ಹಾಕಿ ಬೀಳ್ಕೊಟ್ಟಿದ್ದಾರೆ.