- ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತೀಕರಣ ಚಿಂತನೆ ಬಲಪಡಿಸಲು ಅಧಿವಕ್ತಾ ಪರಿಷತ್ ಸ್ಥಾಪಿಸಲಾಗಿದೆ
- ಒಂದು ದೇಶ – ಒಂದು ಕಾನೂನು ಎಂಬ ಪರಿಕಲ್ಪನೆಯೊಂದಿಗೆ ಏಕರೂಪ ನಾಗರಿಕ ಸಂಹಿತೆ ಬರಬೇಕು.
ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಭಾರತೀಯ ನ್ಯಾಯಾಂಗ ವ್ಯವಸ್ಥೆ ಸದೃಢಗೊಳಿಸಲು ನ್ಯಾಯಾಧೀಶರನ್ನು ಸಂಘಟಿಸಲು, ನ್ಯಾಯ ವ್ಯವಸ್ಥೆಯಲ್ಲಿ ಭಾರತೀಕರಣ ಚಿಂತನೆಗಳು ಬಲಪಡಿಸಲು ಅಧಿವಕ್ತಾ ಪರಿಷತ್ ಸ್ಥಾಪನೆ ಆಗಿದೆ ಎಂದು ಅಧಿವಕ್ತಾ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹನುಮಂತರೆಡ್ಡಿ ಹೇಳಿದರು.
ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಜೆ.ಎನ್.ಅರ್ ಲಡ್ಡಾ ಕಾನೂನು ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಕೀಲರಿಗೆ ತರಬೇತಿ, ನ್ಯಾಯಾಧೀಶರ ಪರೀಕ್ಷೆ ತರಬೇತಿ ಸೆರಿದಂತೆ ನಾಗರಿಕರಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ಅಧಿವಕ್ತಾ ಪರಿಷತ್ ಕಾರ್ಯ ಶ್ಲಾಘನೀಯ” ಎಂದರು.
ವಕೀಲ ಗಿರಿಷ್ ಕುಲಕರ್ಣಿ ಮಾತನಾಡಿ, “ಒಂದು ದೇಶ ಒಂದು ಕಾನೂನು ಎಂಬ ಪರಿಕಲ್ಪನೆಯೊಂದಿಗೆ ಏಕರೂಪ ನಾಗರಿಕ ಸಂಹಿತೆ ಬರಬೇಕು. ಏಕರೂಪ ನಾಗರಿಕ ಸಂಹಿತೆಯಿಂದ ಎಲ್ಲರಿಗೂ ಸಮಾನ ಅವಕಾಶಗಳು ಲಭಿಸುತ್ತವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪಾದಕರ ಬಾಯಿ ಬಡಿಯುವುದು ವಿಕಟ ವಿಡಂಬನೆ
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಶರಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಉಪನ್ಯಾಸಕ ಶ್ರೀನಿವಾಸ ರೆಡ್ಡಿ ಪಾಟೀಲ ಸ್ವಾಗತಿಸಿದರು, ಶಾಂತಕುಮಾರ್ ವಂದಿಸಿದರು. ಈ ವೇಳೆ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.