ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರುಮ್ಮುನುಗುಡ ಗ್ರಾಮದಲ್ಲಿ ಕುಡಿಯುವ ನೀರಿ ಹಾಹಾಕಾರವಿದ್ದು ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸಂಘಟನೆ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಬೇಸಿಗೆ ಕಾಲದಲ್ಲಿ ಉರಿ ಬಿಸಿಲಿನಲ್ಲಿ ಕೊಡ ನೀರಿಗಾಗಿ ಸಾರ್ವಜನಿಕರ ಪರದಾಡುವಂತಾಗಿದೆ. ಕುಡಿಯುವ ನಿರಿಲ್ಲದೆ ಜನರು, ದನ-ಕರುಗಳು, ಕುರಿಗಳು, ಎತ್ತುಗಳು, ಎಮ್ಮೆಗಳಿ ಸೇರಿಂದ ಪ್ರಾಣಿಗಳಿಗೆ ಕುಡಿಯುವ ನೀರು ಇಲ್ಲದೆ ಆತಂಕ ಸೃಷ್ಟಿ ಯಾಗಿದೆ.
ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ ಮತ್ತು ಚನ್ನುರು ಕೆರೆಯಿಂದ ಕುಡಿಯುವ ನೀರಿನ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನೀರಿನ ದಾಹ ನಿಗಿಸಿಲ್ಲ, ಚೆನ್ನೂರು ಕೆರೆಯಿಂದ ನೀರು ತರಲು ಪೈಪಲೈನ್ ಮಾಡಿದರು. ಅದು ಸಂಪೂರ್ಣ ಕಳಪೆ ಮಟ್ಟದ ಪೈಪ್ ಲೈನ್. ಎಲ್ಲೆಂದರಲ್ಲಿ ಪೈಪು ಒಡೆದು ಹೋಗಿವೆ. ಆದರೆ, ಜನರಿಗೆ ನೀರು ಸಿಗುತ್ತಿಲ್ಲ ಅರ್ಧ ಊರಿಗೆ ಮಾತ್ರ ನೀರು ಸಿಗುತ್ತವೆ ಇನ್ನೂಳಿದ ಅರ್ಧ ಊರಿಗೆ ನೀರು ಸಿಗುತ್ತಿಲ್ಲ.
ಪೈಪ ಲೈನ್ ಹದಗೆಟ್ಟಿದೆ. ವಾಲ್ ದುರಸ್ತಿ ಇಲ್ಲ ಉರು ಒಳಗಿನ ಮಸೀದಿಯಲ್ಲಿ ಕೊಳವೆ ಬಾವಿ ಕೆಟ್ಟು 6 ತಿಂಗಳು ಗತಿಸಿದರೂ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ.
ಗ್ರಾಮ ಪಂಚಾಯತಿಯವರ ಬೇಜವಾಬ್ದಾರಿ ತೋರುತ್ತಿದ್ದಾರೆ. ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ಹತ್ತಿರ ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ನಳ ಕೂಡಿಸ ಬೇಕು. ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿವೆ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸ ಬೇಕು ಎಂದು ಆಗ್ರಹಿಸಿದರು.
ರುಮ್ಮುನುಗುಡನಲ್ಲಿ ಸಾರ್ವಜನಿಕರು ಓಡಾಡುವ ಬಸ್ ನಿಲ್ದಾಣದ ಬಳಿ ನೀರು ಸಿಗುತ್ತಿಲ್ಲ. ಊರಿನ ಜನರು ನೀರಿಗಾಗಿ, ಕೊಡ ಹಿಡಿದುಕೊಂಡು ನೀರಿರುವ ಕಡೆ ಅಲೆಯಬೇಕಾಗಿದೆ. ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂದೆ ಖಾಲಿಕೊಡಗಳೊಂದಿಗೆ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣಬಸಪ್ಪಾ ಮಮಶೆಟ್ಟಿ, ತುಳಜಪ್ಪಾ ಹಲಿಗಿ, ರಸೂಲ್ ಪಟೇಲ್ ಡೆವಿಡ್ ರಾಂಪೂರಕರ, ಮೊಘ, ಬಲವಂತ ಬಡಿಗೆರ, ಮಶಾಖ ಪಟೇಲ್, ಮೋಶಿನ ಶಿರಾಜ ಪಟೇಲ್ ಇನ್ನಿತರರು ಉಪಸ್ಥಿತರಿದ್ದರು.