ಕಲಬುರಗಿ | ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಕ್ರಮ; ಮೇಲ್ವಿಚಾರಕಿ ಅಮಾನತಿಗೆ ಆಗ್ರಹ

Date:

Advertisements

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಮೇಲ್ವಿಚಾರಕಿ ಸರಿತಾ ಆರ್. ಕುಲಕರ್ಣಿ ಅವರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸೇಡಂನಲ್ಲಿ ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ.

“ಹಿರಿಯ ಮೇಲ್ವಿಚಾರಕಿ ಸರಿತಾ ಆರ್. ಕುಲಕರ್ಣಿ ಅವರ ಅಮಾನತಿಗೆ ಆಗ್ರಹಿಸಿ ಅಕ್ಟೋಬರ್‌ 7ರಂದು ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತಂದರೂ ಕೂಡ ಅವರು ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಉಪ ನಿರ್ದೇಶಕರೊಟ್ಟಿಗೆ ಮಾತನಾಡಿದರೆ ಹಾರಿಕೆಯ ಉತ್ತರ ನೀಡುತ್ತಿದ್ದು, ಸರಿತಾ ಆರ್ ಕುಲಕರ್ಣಿತಯವರ ಲಂಚ ಮತ್ತು ಅಧಿಕಾರ ದರ್ಪದ ಬಗ್ಗೆ ನಮಗೆ ಸಾಕ್ಷಿ ಕೊಡಿರೆಂದು ಕೇಳುತ್ತಾರೆ” ಎಂದು ಹೇಳಿದರು.

Advertisements

“ನೌಕರಿಗೆಂದು ಬಂದವರು ಕಡುಬಡವರು ಹಣ ಕೊಟ್ಟಿರುತ್ತಾರೆ. ಆದರೆ ಅಂಥವರು ಸಾಕ್ಷಿ ಹೇಳಿದರೆ ನೌಕರಿ ಹೋಗುತ್ತದೆಂದು ಹೆದರಿ ಯಾರೂ ಹೇಳುವುದಿಲ್ಲ. ಸಬ್ ಇನ್ಸ್‌ಪೆಕ್ಟರ್ ಹುದ್ದೆಗಾಗಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಐಎ) ನಡೆಸಿದ. ನೇಮಕ ಪ್ರಕ್ರಿಯೆಯಲ್ಲಿ ತನಿಕೆಯಾದಾಗ ಗೊತ್ತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಯಾರು ಲಂಚ ತೆಗೆದುಕೊಂಡಿರುತ್ತಾರೆ, ಕೆಳ ಹಂತದ ನೌಕರಿದಾರರಿಗೆ ಹೆದರಿಸುವುದು ಮತ್ತು ನೊಟೀಸ್ ಕೊಟ್ಟು ಬೆದರಿಸುವುದು‌, ಅಂಗನವಾಡಿ ಶಿಕ್ಷಕಿಯರಿಗೆ ಇನ್ನೊಂದು ಶಿಕ್ಷಕಿಯ ಸ್ಥಾನದ ಇನ್‌ಚಾರ್ಜ್ ಕೊಡಬೇಕಾದರೆ, ಸುಮಾರು ₹5‌,000 ಲಂಚವನ್ನು ಫೋನ್ ಪೇ ಮಾಡುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಶಾಲೆ ಬಿಟ್ಟು ಹೋದಲ್ಲಿ ₹1000 ದಂತೆ ಎಷ್ಟು ದಿನ ಬಿಡುತ್ತಾರೆ ಅಷ್ಟೂ ಹಣ ಪಡೆಯುತ್ತಿದ್ದಾರೆ. ವರ್ಗಾವಣೆಗೆ ₹50,000, ಪ್ರಮೋಷನ್‌ಗೆ ₹50,000 ಹಣ ಪಡೆದಿರುವುದು ಸೂಕ್ತ ತನಿಖೆ ಆದರೆ ಮಾತ್ರ ಬಯಲಿಗೆ ಬರಲಿದೆ” ಎಂದು ಆಗ್ರಹಿಸಿದರು.

“ಒಂದು ಅಂಗನವಾಡಿ ಕೇಂದ್ರದಲ್ಲಿ ಉಳಿದ ಆಹಾರ ಧಾನ್ಯದಲ್ಲಿ ಶೇ.50ರಷ್ಟು ತನಗೆ ಕೊಡಬೇಕೆಂದು ಅಲಿಖಿತ ನಿಯಮ ಇಟ್ಟು ಅದನ್ನು ಅವರಿಗೆ ಕೊಡದವರಿಗೆ ನೊಟೀಸ್ ಕೊಟ್ಟು ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಎಲ್ಲ ನೇಮಕಾತಿಗಳಿಗೂ ಮೂಲ ದಾಖಲಾತಿಗಳನ್ನು ತಮ್ಮ ಬಳಿ ಅವರಿಗೆ ನೌಕರಿ ಮಾಡಿಸಿಕೊಡುತ್ತೇನೆಂದು ಮುಂಗಡ ಹಣ ಪಡೆದಿರುತ್ತಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕವಿಗೋಷ್ಠಿಗೆ ಬಂದಿದ್ದ ಕೆನಡಾದ ಕವಿ ಹೃದಯಾಘಾತದಿಂದ ನಿಧನ

“ನಮ್ಮ ಮನವಿ ಪತ್ರದ ಆಧಾರದ ಮೇಲೆ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಶೀಘ್ರ ತನಿಖೆ ನಡೆಸಿ ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಳಂಬ ನೀತಿ ಅನುಸರಿಸಿದರೆ ನಾವು ಮುಂದೆ ಹಂತ ಹಂತವಾಗಿ ತೀವ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಾಗಣ್ಣ ಕಲ್ಲದೇವನಹಳ್ಳಿ, ಸದ್ದಾಂ ಹುಸೇನ್, ಮಾನಪ್ಪ ಕಲ್ಲದೇವನಳ್ಳಿ, ಸಾಬಣ್ಣ ಕುರಕುಂದಿ, ಮಲ್ಲಪ್ಪ ಲಂಡನ್ಕರ್, ದೇವು ಎಂಟಮನಿ, ಶರಣಪ್ಪ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X