ನೆಚ್ಚಿನ ರಾಜಕೀಯ ನಾಯಕ, ಸಿನಿಮಾ ನಟ-ನಟಿಯರ ಅಭಿಮಾನ ತೋರಿಸಿಕೊಳ್ಳಲು ಅಭಿಮಾನಿಗಳು ನಾನಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಅಭಿಮಾನಿ ತಮ್ಮ ಎದೆಯ ಮೇಲೆ ನೆಚ್ಚಿನ ಇಬ್ಬರು ರಾಜಕೀಯ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಿಲಕೇರಿ ಗ್ರಾಮದ ಹಣಮಂತ ಹೊಸಮನಿ ಟ್ಯಾಟೂ ಹಾಕಿಸಿಕೊಂಡವರು, ತಲೆಯ ಮೇಲೆ ಖರ್ಗೆ ಹೆಸರು ಹಾಗೂ ಕಾಂಗ್ರೆಸ್‌ನ ಹಸ್ತದ ಚಿನ್ಹೆ ಹೆರ್ ಕಟ್ ಮಾಡಿಸಿದ್ದಾರೆ.
ಹಣಮಂತ ಹೊಸಮನಿ ಅವರು ತಮ್ಮ ಬೆನ್ನಿನ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಜೀವನದಲ್ಲಿ ನಡೆದು ಬಂದ ಹಾದಿಯ ಪ್ರಮುಖ ಘಟಗಳ ಟ್ಯಾಟೂ ಅಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅಭಿಮಾನಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಸಿಲ ಧಗೆಗೆ ತತ್ತರಿಸಿದ್ದ ಜನರಿಗೆ ತಂಪೆರೆದ ಮಳೆರಾಯ
ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಟ್ಯಾಟೂ ಹಾಕಿಸಿಕೊಂಡ ಹಣಮಂತ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದರು, “ಇಂತಹವರ ಋಣ ಹೇಗೆ ತೀರಿಸಬೇಕು” ಎಂದು ಪ್ರಿಯಾಂಕ್ ಹೇಳಿದರು.