ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇಂದು 76 ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ ಡಿ ಧ್ವಜಾರೋಹಣವನ್ನು ಮಾಡಿದರು.
ಸಮಾರಂಭದಲ್ಲಿ ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕಿ ಮೆಹನಾಝ್ ಸರ್ಝಿನ, ಗಣರಾಜ್ಯೋತ್ಸವ ಆಚರಿಸುವ ಉದ್ದೇಶ ಹಾಗೂ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಲಹಾ ಸಮಿತಿ ಕಾರ್ಯದರ್ಶಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಹಾಗೂ ಸಲಹಾ ಸಮಿತಿಯ ಸದಸ್ಯೆ ಮಮಿತಾ ಎಸ್ ರೈ, ಪದವಿ ವಿಭಾಗದ ಸಂಯೋಜಕಿ ಹಾಗೂ ಸಲಹಾ ಸಮಿತಿಯ ಸದಸ್ಯೆ ಆಬಿದ ಬಿ, ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಹಾಗೂ ಸಲಹಾ ಸಮಿತಿಯ ಸದಸ್ಯೆ ಸಲೀಮ, ನವ್ಯ, ಫಾತಿಮತ್ ಶಫೀಕ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ?: ದಮ್ಮಾಮ್ | ಕಲ್ಲಡ್ಕ ಅಬ್ರಾಡ್ ಫೋರಂನಿಂದ ಎನ್.ಆರ್.ಐ ಮೀಟ್
