ಮಿನಿ ಬಸ್ ನಿಲ್ದಾಣವೇ ಆಶ್ರಯ:
ಕಮಲನಗರ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50 ರ ಮುಖ್ಯ ರಸ್ತೆ ಅಲ್ಲಮ ಪ್ರಭು ವೃತ್ಥದ ಹತ್ತಿರ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಫುಟ್ ಪಾತ್ ಮೇಲೆ ಸಣ್ಣಪುಟ್ಟ ಅಂಗಡಿಗಳಿದ್ದ ಕಾರಣ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಇನ್ನು ಮುಖ್ಯ ರಸ್ತೆ ಪಕ್ಕವೇ ದ್ವಿಚಕ್ರ ವಾಹನ, ಖಾಸಗಿ ವಾಹನಗಳು ನಿಲುಗಡೆ ಮಾಡುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಮದನೂರು ರಸ್ತೆಯಲ್ಲಿರುವ ಬಸ್ ನಿಲ್ದಾಣ ಬಳಕೆಯಾಗದೆ ಪಾಳು ಬಿದ್ದ ಕಾರಣ ಮುಖ್ಯ ರಸ್ತೆ ಪಕ್ಕದಲ್ಲಿ ಮಿನಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ತಾಲ್ಲೂಕಿನ ನಾನಾ ಗ್ರಾಮಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸುತ್ತಾರೆ. ಪ್ರಯಾಣಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸೌಕರ್ಯ ಇಲ್ಲದ ಕಾರಣ ಬಹುತೇಕರು ರಸ್ತೆ ಪಕ್ಕದಲೇ ಬಸ್ ಗಳಿಗೆ ಕಾಯಬೇಕಾದ ಪರಿಸ್ಥಿತಿಯಿದೆ.
ಪಟ್ಟಣದ ನಿವಾಸಿ ಜನಾರ್ಧನ ಸಾವರಗೆಕರ್ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಕಮಲನಗರದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ನಿಲ್ದಾಣ ಸಾರ್ವಜನಿಕರಿಗೆ ಉಪಯುಕ್ತಯಿಲ್ಲದೆ ಧೂಳು ತಿನ್ನುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿದ ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ತಾಲ್ಲೂಕಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ ಜೊತೆಗೆ ವಾಹನ ಸಂಚಾರವೂ ದಟ್ಟಣೆಯಾಗಿದೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬಸ್ ನಿಲ್ದಾಣದಲ್ಲಿ ಮಿನಿ ಬಸ್ ಡಿಪೊ ನಿರ್ಮಿಸಿ:
ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ಕಮಲನಗರ ಬಸ್ ನಿಲ್ದಾಣ ರಾಮಚಂದ್ರ ವೀರಪ್ಪ ಸಂಸದರಾಗಿದ್ದ ವೇಳೆ ನಿರ್ಮಾಣವಾಗಿದ್ದು, ಆದರೆ ಅದು ಸಾರ್ವಜನಿಕರಿಗೆ ಅನುಕೂಲವಿಲ್ಲ. ಈ ಬಗ್ಗೆ ಸಾರಿಗೆ ಇಲಾಖೆಗೆ ಹಲವು ಸಲ ಪತ್ರ ಬರೆದು ಬಸ್ ನಿಲ್ದಾಣ ಆವರಣದಲ್ಲಿ ಮಿನಿ ಬಸ್ ಡಿಪೊ ನಿರ್ಮಿಸಿದರೆ ಬಸ್ ನಿಲ್ದಾಣವೂ ಆರಂಭಿಸಬೇಕೆಂದು ಹೇಳಿದ್ದೆ, ಆದರೆ ಯಾವುದೇ ಬದಲಾವಣೆ ಆಗಲಿಲ್ಲ. ಈಗಲಾದರೂ ಇಲಾಖೆ ಬಸ್ ನಿಲ್ದಾಣ ಆರಂಭಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
ಈ ಬಗ್ಗೆ ಔರಾದ್ ಬಸ್ ಘಟಕದ ವ್ಯವಸ್ಥಾಪಕ ಎಸ್ ಟಿ ರಾಠೋಡ್, ಈದಿನ.ಕಾಮ್ ದೊಂದಿಗೆ ಮಾತನಾಡಿ, “ಕಮಲನಗರ ಬಸ್ ನಿಲ್ದಾಣ ಬಳಕೆಯಲಿಲ್ಲ ಎಂಬುದು ಗಮನಕ್ಕಿದೆ, ಸಾರಿಗೆ ಇಲಾಖೆಯ ಸಿವಿಲ್ ಇಂಜಿನಿಯರ್ ಜೊತೆಗೆ ಮಾತಾಡಿದ್ದೇನೆ, ಕೂಡಲೇ ಬಸ್ ನಿಲ್ದಾಣ ಆವರಣ ಸ್ವಚ್ಛಗೊಳಿಸಿ ನಿಲ್ದಾಣದಲ್ಲಿ ಓರ್ವ ಕಂಟ್ರೋಲರ್ ನ್ನು ನೇಮಿಸಿ ನಿಲ್ದಾಣ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು” ಎಂದು ತಿಳಿಸಿದ್ದಾರೆ.
Good job sir
मादिगा दंडोरा संघटना कमलनगर तालुका अध्यक्ष विजयकुमार सूर्यवंशी भवानी बीजलगाव