ಕನಕದಾಸರು ಈ ನಾಡು ಕಂಡ ಕವಿಯು ಹೌದು ಕಲಿಯು ಹೌದು ಎಂದು ಇಂಗ್ಲೆಂಡ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದರು ಎಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉಪನ್ಯಾಸಕ ದೇವಿದಾಸ ಜೋಶಿ ಹೇಳಿದರು.
ಔರಾದ್ ಪಟ್ಟಣದ ತಹಸೀಲ್ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ನಡೆದ ಕನಕ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ‘ವಿದೇಶಿಗರು ಕನಕನಲ್ಲಿನ ಪ್ರತಿಭೆ, ಸಾಮರ್ಥ್ಯ ಹಾಗೂ ಯೋಗ್ಯತೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ’ ಎಂದರು.
ಕನ್ನಡಿಗರು ಕನಕದಾಸರನ್ನು ಇಲ್ಲಿವರೆಗೂ ಅರಿತುಕೊಳ್ಳಲು ಸಾದ್ಯವಾಗಿಲ್ಲ. ಕನಕ ಒಬ್ಬ ಹರಿದಾಸರು ಅಥವಾ ಒಂದು ಸಮುದಾಯದ ವ್ಯಕ್ತಿ ಎಂದು ಪರಿಗಣಿಸದೆ ಅವರು ಹಲವು ವ್ಯಕ್ತಿತ್ವಗಳ ಸಂಗಮ ಎಂಬುದು ಮನನ ಮಾಡಿಕೊಳ್ಳಬೇಕಿದೆ ಎಂದರು.
ಪಪಂ ಅಧ್ಯಕ್ಷೆ ಸರುಬಾಯಿ ಘುಳೆ ಮಾತನಾಡಿ, ‘ಕನಕದಾಸರು ಬಸವಾದಿ ಶರಣರಂತೆ ಬದುಕಿನ ಆಶಯ ಜನಸಾಮಾನ್ಯರಿಗೆ ತೋರ್ಪಡಿಸಿದ ಮೇರು ವ್ಯಕ್ತಿತ್ವ’ ಎಂದರು.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಮಾತನಾಡಿ, ‘ಇಂದು ಕನಕದಾಸರ ವಿಚಾರಗಳು ನಮ್ಮೆಲ್ಲರ ಬದುಕಿಗೆ ಅವಶ್ಯಕವಾಗಿವೆ’ ಎಂದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಧೋಂಡಿಬಾ ನರೋಟೆ, ಪಪಂ ಸದಸ್ಯ ಗುಂಡಪ್ಪ ಮುದಾಳೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಿಇಒ ಪ್ರಕಾಶ ರಾಠೋಡ್, ಟಿಎಚ್ಒ ಡಾ. ಗಾಯತ್ರಿ, ವಕೀಲರ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ, ಗಣಪತಿ ಮೇತ್ರೆ, ಸಂಜೀವ ಮೇತ್ರೆ, ಮಾದಪ್ಪ ಕೋಟೆ, ಸುಧಾಕರ ಕೊಳ್ಳುರ್, ಶಿವಾಜಿರಾವ ಪಾಟೀಲ್, ಸೂರ್ಯಕಾಂತ ಸಿಂಗೆ, ಬಾಲಾಜಿ ಅಮರವಾಡಿ, ಅರ್ಜುನ ಭಂಗೆ, ರಾಜಕುಮಾರ ಮುದಾಳೆ, ಹಣಮಂತ ಮೇತ್ರೆ ಎಕಲಾರ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇನ್ನಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬಸ್ ನಿಲ್ದಾಣ ಹತ್ತಿರದಲ್ಲಿನ ಕನಕದಾಸ ವೃತ್ರದಲ್ಲಿ ಪೂಜೆಗೈದು ಮೆರವಣಿಗೆಗೆ ಪಪಂ ಅಧ್ಯಕ್ಷೆ ಸರುಬಾಯಿ ಘುಳೆ ಚಾಲನೆ ನೀಡಿದರು. ಬಸವೇಶ್ವರ ವೃತ್ರ, ಸಾರ್ವಜನಿಕ ಆಸ್ಪತ್ರೆ, ಅಗ್ನಿಕುಂಡ, ಪೋಲಿಸ್ ಠಾಣೆ, ನ್ಯಾಯಾಲಯ, ಪ್ರವಾಸಿ ಮಂದಿರ ಮಾರ್ಗವಾಗಿ ತಹಸೀಲ್ ಆವರಣ ತಲುಪಿತು.
ಈ ಸುದ್ದಿ ಓದಿದ್ದೀರಾ? ಮನುವಾದದ ಮಡಿವಂತಿಕೆ, ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಬಂಡಾಯಗಾರ ಕನಕದಾಸ
ಮೆರವಣಿಗೆಯಲ್ಲಿ ಕಲಬುರ್ಗಿಯ ಡೊಳ್ಳು ಕುಣಿತ ಗಮನ ಸೆಳೆಯಿತು. ವೇದಿಕೆ ಮೇಲೆ ವಿವಿಧ ಶಾಲಾ ಕಾಲೇಜು ಮಕ್ಕಳು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ವಿವಿಧ ಶಾಲಾ ಮಕ್ಕಳಿಂದ ಕನಕದಾಸರ ಭಕ್ತಿ ಗೀತೆ ಮತ್ತು ಕೀರ್ತನೆಗಳ ನೃತ್ಯ ಎಲ್ಲರ ಗಮನ ಸೆಳೆಯಿತು.