ಕನಕಪುರ | ಉದ್ಯಮ ಕ್ಷೇತ್ರಕ್ಕೆ ರತನ್ ಟಾಟಾ ಕೊಡುಗೆ ಅಪಾರ: ಜಯಕರ್ನಾಟಕ ಜನಪರ ವೇದಿಕೆ

Date:

Advertisements

ಭಾರತರತ್ನ ರತನ್ ಟಾಟಾ ಸ್ಮರಣಾರ್ಥವಾಗಿ ಕನಕಪುರ ಪಟ್ಟಣದ ಚನ್ನಬಸಪ್ಪ ವೃತ್ತದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರತನ್ ಟಾಟಾ ಹೆಸರೇ ದೇಶದ ತರುಣರಿಗೆ ಪ್ರೇರಣೆ. ಅವರ ಹೆಸರು ಕೇಳಿದರೆ, ಓದೇ ಇಲ್ಲದ ವ್ಯಕ್ತಿಯೂ ಒಂದು ಕ್ಷಣ ಆ ಕಡೆ ಗಮನ ಹರಿಸುತ್ತಾರೆ. ಸ್ವತಂತ್ರ ಭಾರತದ ಅಭಿವೃದ್ಧಿಗೆ, ವಿಶೇಷವಾಗಿ ಉದ್ಯಮ ವಲಯದಲ್ಲಿ, ರತನ್ ಟಾಟಾ ಕೊಡುಗೆ ಅಪರಿಮಿತವಾಗಿದೆ. ಟಾಟಾ ಸಂಸ್ಥೆಯು ಕೇವಲ ಉದ್ಯಮವಷ್ಟೇ ಅಲ್ಲ, ಲಕ್ಷಾಂತರ ಮನೆಗಳಿಗೆ ಬೆಳಕು ತಂದುಕೊಟ್ಟ ಸಂಸ್ಥೆಯಾಗಿದೆ ಎಂದು ಕುಮಾರಸ್ವಾಮಿ ಸ್ಮರಿಸಿದರು.

ರತನ್ ಟಾಟಾರ ತಾತ ಜಾಮ್‌ಶೆಟ್‌ಜಿ ಟಾಟಾ ಸಹ ಉದ್ಯಮ ಕ್ಷೇತ್ರದಲ್ಲಿ ಪ್ರಮುಖ ಹೆಸರು. ಟಾಟಾ ಕುಟುಂಬದ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡಿದ್ದು, ಇದನ್ನು ದೇಶವೇ ಕಂಡಿದೆ. ಉದ್ಯಮದ ಮೂಲಕ ಲಾಭ ಪಡೆಯುವುದರ ಜೊತೆಗೆ, ಸಮಾಜಮುಖಿ ಕೆಲಸಗಳಲ್ಲಿ ತಮ್ಮ ಸಂಪತ್ತನ್ನು ದಾನ ಮಾಡುವ ನಿಷ್ಠೆ ರತನ್ ಟಾಟಾ ಅವರದು ಎಂದು ಪ್ರಶಂಸಿಸಿದರು.

Advertisements

ಈ ಸಂದರ್ಭದಲ್ಲಿ ಕವಿ ಹಾಗೂ ಹೋರಾಟಗಾರ ಕೂಗಿ ಗಿರಿಯಪ್ಪ ಮಾತನಾಡಿ, “ರತನ್ ಟಾಟಾ ಬಳಿ ಅಪಾರ ಸಂಪತ್ತು ಇದ್ದರೂ, ಅವರು ದಾನ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ತಮ್ಮ ಲಾಭದ ಬಹುಪಾಲು ಹಣವನ್ನು ಸಮಾಜಮುಖಿ ಕೆಲಸಗಳಿಗೆ ಮೀಸಲಾಗಿಸಿದ್ದರು. ವಿಶೇಷವಾಗಿ 2020ರ ಕೊರೋನಾ ಸಂದರ್ಭದಲ್ಲಿ ಜನರ ಆರೋಗ್ಯಕ್ಕಾಗಿ ದೊಡ್ಡ ಮೊತ್ತದ ಹಣವನ್ನು ದಾನ ಮಾಡಿ ಸಮಾಜದ ಪಾಲಿಗೆ ಮಾದರಿಯಾಗಿದ್ದರು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಮಂಗಳೂರು | ಮುಮ್ತಾಝ್ ಅಲಿ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹಕ್ಕೊತ್ತಾಯ ಸಭೆ

2024ರಲ್ಲಿ ರತನ್ ಟಾಟಾ ನಿವ್ವಳ ಆಸ್ತಿ 3800 ಕೋಟಿ ರೂಪಾಯಿ ಅಷ್ಟಿತ್ತು. ಆದರೆ ತಮ್ಮ ವೈಯಕ್ತಿಕ ಸೌಕರ್ಯಗಳಿಗೆ ಕೇವಲ ಸ್ವಲ್ಪ ಭಾಗವನ್ನು ಬಳಸಿ, ಹೆಚ್ಚಿನದನ್ನು ಸಮಾಜದ ಉನ್ನತಿಗೆ ನೀಡಿದರು. ಅವರ ದಾನ, ಸಾಮಾಜಿಕ ಸೇವೆಗಳು ಶತಕೋಟಿ ಭಾರತೀಯರ ಹೃದಯದಲ್ಲಿ ಸದಾ ಉಳಿಯುತ್ತವೆ ಎಂದರು.

ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X