ಮೈಸೂರು ನಗರದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನಕಲೆಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ, ನೃತ್ಯ ಮತ್ತು ಸಂಗೀತ ದಿನದ ಪ್ರಯುಕ್ತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಚೂಡಾಮಣಿ ಮಾತನಾಡಿ ‘ ಕನ್ನಡ ನಾಡು ಸೌಹಾರ್ದದ ಕಲಾ ಸಂಪತ್ತಿನ ಬೀಡು ‘ ಎಂದರು.
” ಕಲಾವಿದರು ಇದನ್ನು ಉಳಿಸಿ ಬೆಳೆಸಿ ಮಾದರಿಯಾಗಬೇಕು. ಧ್ವನಿಯಿಂದ ಲಿಪಿಗೆ, ಲಯದಿಂದ ರಸಕ್ಕೆ ಸಾಂಸ್ಕೃತಿಕ ಅಸ್ಮಿತೆ ಮತ್ತು ಶಿಕ್ಷಣದಲ್ಲಿ ದೇಶಿ ಶಿಕ್ಷಣದ ಮಹತ್ವ ಅರಿಯಬೇಕು. ಪ್ರದರ್ಶನ ಕಲೆಗಳು ಹಾಗೂ ಸಂಸ್ಕೃತ ಪರಂಪರೆ ಕನ್ನಡ ನಾಡಿನ ಜೀವಾಳವಾಗಿದೆ ” ಎಂದು ಹೇಳಿದರು.

ಹಿರಿಯ ವಿದ್ವಾಂಸ ನಿವೃತ್ತ ಪ್ರೊ. ಶರ್ಮಾ ಮಾತನಾಡಿ ಸಂಗೀತ ವಿವಿ ಕುಲಪತಿ ಪ್ರೊ ನಾಗೇಶ್ ಬೆಟ್ಟಕೋಟೆ ಕಾರ್ಯ ವೈಖರಿಯಿಂದ ವಿವಿಯನ್ನು ದೇಶದಲ್ಲೇ ಪ್ರಸಿದ್ಧಗೊಳಿಸಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ನಾಗೇಶ್ ಬೆಟ್ಟಕೋಟೆ ಸಂಗೀತ ಮತ್ತು ಕಲೆಯ ಸಂಶೋದಕರು ಹಾಗೂ ತಜ್ಞರು ಸಂಶೋಧನೆಯಲ್ಲಿ ತೊಡಗಿ ಪರಂಪರೆಯ ಜ್ಞಾನದ ಮೇಲೆ ಅತಿಹೆಚ್ಚು ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಕೊಡಗು | ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ : ಡಾ ಮಂತರ್ ಗೌಡ
ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ವೃಂದ, ಸಂಶೋಧಕರು, ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನೂರಾರು ಕಲಾವಿದರು ಸಮ್ಮೇಳನದಲ್ಲಿ ಇದ್ದರು.