ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ, ರಾಜ್ಯ ಮಟ್ಟದಲ್ಲಿ ನಡೆಸುವ ವಾರ್ಷಿಕ ಪರೀಕ್ಷೆಯು ಕಾಪು ವರ್ತುಲದ ಸೆಂಟರ್ 166 ರ ವಿದ್ಯಾರ್ಥಿಗಳಿಗೆ, ಹೋಟೆಲ್ ಕೆ.1 ನ ಸಭಾಂಗಣದಲ್ಲಿ ನಡೆಯಿತು.
ಕಾಪು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷರ ಆದ ಅನ್ವರ್ ಅಲಿ ಮಾತನಾಡಿ ಇಸ್ಲಾಮ್ ನ ಬಗ್ಗೆ ನೈಜ ತಿಳುವಳಿಕೆ ಮೂಡಿಸುವ ಬಗ್ಗೆ, ತಳ ಮಟ್ಟದಿಂದ ಹಿಡಿದು ಅಂತಿಮ ಪರಿಣಾಮದ ತನಕದ ಬೋಧನೆಗಳನ್ನು ಅಭ್ಯಸಿಸಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯನ ಇಹ ಮತ್ತು ಪರಲೋಕ ಜೀವನ ಬೆಳಗುತ್ತದೆ ಮತ್ತು ಮನುಷ್ಯನು ಸಮಾಜದಲ್ಲಿ ಸೌಹಾರ್ದಮಯ ಜೀವನ ಸಾಗಿಸಬಹುದು ಎಂಬ ಸಂದೇಶವುಳ್ಳ ಇಸ್ಲಾಮಿ ಪುಸ್ತಕಗಳನ್ನು ತಮ್ಮ ಮನೆಯಲ್ಲಿಯೇ ಅಧ್ಯಯನ ಮಾಡಿ ಬಂದು ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ ಮತ್ತು ಈ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತೇವೆ ಎಂದು ಹೇಳಿದರು.

ಈ ಪರೀಕ್ಷೆಯಲ್ಲಿ ಕಾಪು ಭಾಗದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಪು ಕೇಂದ್ರದ ಸಂಚಾಲಕಿ ಶೇಹೆನಾಜ್ ಕಾಪು, ಫಝಿಲತ್ ಬಾನು, ಬೀಬಿ ಬತುಲ್ ಹಾಗೂ ಮುಹಮ್ಮದ್ ಹಾಶಿಮ್ ಸಾಹೇಬ್ ಉಪಸ್ಥಿತರಿದ್ದರು.
